ಮಂಗಳೂರು, ಡಿ.30 (DaijiworldNews/PY): ಕಾರ್ಯಕರ್ತರ ವಿಜಯೋತ್ಸವಕ್ಕೆ ಆಗಮಿಸಿದ ಸಂದರ್ಭ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬೊಂದೇಲ್ನ ಎಂಜಿಸಿ ಮತ ಎಣಿಕಾ ಕೇಂದ್ರದಲ್ಲಿ ನಡೆದಿದೆ.
ಶಾಸಕ ಉಮಾನಾಥ್ ನೇತೃತ್ವದಲ್ಲಿ ಬಿಜೆಪಿ ಸಂಭ್ರಮಾಚರಣೆ ನಡೆಯುತ್ತಿದ್ದು, ಈ ವೇಳೆ ಕಾರ್ಯಕರ್ತರ ವಿಜಯೋತ್ಸವಕ್ಕೆ ಘೋಷಣೆ ಕೂಗುತ್ತಾ ಮುಖಾಮುಖಿಯಾದ ಎರಡು ಪಕ್ಷದ ಕಾರ್ಯಕರ್ತರ ನಡುವೆ ಘೋಷಣೆಯ ಚಕಮಕಿ ನಡೆದಿದೆ
ಈ ವೇಳೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ರೀತಿ ಮಾಡದೇ ಶಾಂತವಾಗಿರಿ ಎಂದು ಮನವೊಲಿಕೆ ಮಾಡಿದ ಪೊಲೀಸರ ಮಾತಿಗೆ ಕಿವಿಗೊಡದೇ ಪೊಲೀಸರ ವಿರುದ್ದ ಹರಿಹಾಯ್ದಿದ್ದಾರೆ.
ಸ್ಥಳದಿಂದ ದೂರ ಸರಿಯುಂತೆ ತಿಳಿಸಿದ್ದಕ್ಕೆ ಆಕ್ಷೇಪಿಸಿ ಕ್ಯಾತೆ ತೆಗೆದ ಕಾರಣ, ಈ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.