ಹೊಸದಿಲ್ಲಿ,ಡಿ.30 (DaijiworldNews/HR): ಬ್ರಿಟನ್ನಿಂದ ದೇಶಕ್ಕೆ ಬಂದವರಿಂದ ಹರಡುತ್ತಿರುವ ಹೊಸ ರೂಪಾಂತರ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಹೆಚ್ಚು ನಿರ್ಬಂಧಗಳನ್ನು ಜಾರಿಗೆ ತರಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.
ಸಾಂಧರ್ಭಿಕ ಚಿತ್ರ
ಡಿಸೆಂಬರ್ 30, 31 ಹಾಗೂ ಜನವರಿ 1 ರಂದು ನಿರ್ಬಂಧಗಳನ್ನು ವಿಧಿಸಬೇಕು, ಮತ್ತೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಇನ್ನು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ಸಾಕಷ್ಟು ಮುನ್ನಚ್ಚರಿಕೆ ಹಾಗೂ ಕಣ್ಗಾವಲು ವಹಿಸುವ ಅಗತ್ಯವಿದೆ ಎಂದು ರಾಜ್ಯಗಳಿಗೆ ಉನ್ನತ ಅಧಿಕಾರಿಯೊಬ್ಬರು ಪತ್ರದಲ್ಲಿ ತಿಳಿಸಿದ್ದಾರೆ.