ನವದೆಹಲಿ, ಡಿ. 30 (DaijiworldNews/MB) : ಭಾರತಕ್ಕೆ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಜನವರಿ 31 ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ತಿಳಿಸಿದೆ.
"ಈ ನಿರ್ಬಂಧವು ಅಂತರರಾಷ್ಟ್ರೀಯ ಕಾರ್ಗೋ ವಿಮಾನ ಮತ್ತು ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಅನುಮೋದಿಸಲ್ಪಟ್ಟ ವಿಮಾನಗಳಿಗೆ ಅನ್ವಯಿಸುವುದಿಲ್ಲ" ಎಂದು ಅಧಿಕೃತ ಹೇಳಿಕೆಯಲ್ಲಿ ಕೇಂದ್ರ ಬುಧವಾರ ತಿಳಿಸಿದೆ.
"ಆದರೆ ಪ್ರಾಧಿಕಾರವು ಕೆಲವೊಂದು ದೇಶಗಳಿಗೆ ನಿಗದಿತ ವಿಮಾನಗಳನ್ನು ಅನುಮತಿಸಬಹುದು" ಎಂದು ಕೂಡಾ ಇದರಲ್ಲಿ ಉಲ್ಲೇಖ ಮಾಡಲಾಗಿದೆ.
ಪ್ರಸ್ತುತ, ಭಾರತವು ಹಲವಾರು ದೇಶಗಳೊಂದಿಗೆ 'ಏರ್ ಬಬಲ್' ಒಪ್ಪಂದಗಳನ್ನು ಮಾಡಿಕೊಂಡಿದೆ.
ಈ ಒಪ್ಪಂದವು ಎರಡೂ ದೇಶಗಳ ಪ್ರಜೆಗಳಿಗೆ ಉಭಯ ದೇಶಗಳಿಗೆ ವಿಮಾನ ಸಂಚಾರ ನಡೆಸಲು ಅನುವು ಮಾಡಿಕೊಡುತ್ತದೆ.
ಕೊರೊನಾ ಕಾರಣದಿಂದ ಮಾರ್ಚ್ 25 ರಂದು ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಳಿಕ ದೇಶೀಯ ವಿಮಾನ ಸೇವೆಗಳು ಮೇ 25 ರಿಂದ ಪುನರಾರಂಭಗೊಂಡವು.