ಬೆಳ್ತಂಗಡಿ, ಡಿ. 30 (DaijiworldNews/MB) : ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯ ವೇಳೆ ಮತ ಎಣಿಕಾ ಕೇಂದ್ರದ ಹೊರಗೆ ಎಸ್ಡಿಪಿಐ ಹಾಗೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದಲ್ಲಿ ತೊಡಗಿದ್ದಾಗ ಪಾಕಿಸ್ಥಾನ ಪರ ಫೋಷಣೆ ಕೇಳಿಬಂದಿದೆ ಎಂದು ಹೇಳಲಾಗಿದೆ.
ಎಸ್ಡಿಪಿಐ ಹಾಗೂ ಬಿಜೆಪಿ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಜಮಾಯಿಸಿ ವಿಜಯೋತ್ಸವದ ನಡೆಸುತ್ತಿದ್ದ ವೇಳೆ ಪಾಕಿಸ್ಥಾನ ಜಿಂದಾಬಾದ್ ಎಂಬ ಜೈಕಾರದ ಘೋಷಣೆ ಕೂಗಿದ್ದಾರೆ ಎಂದು ತಿಳಿದು ಬಂದಿದೆ.
"ಪಾಕಿಸ್ಥಾನ ಜಿಂದಾಬಾದ್" ಘೋಷಣೆಯು ಸ್ಪಷ್ಟವಾಗಿ ಕೇಳಿಸುತ್ತಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲು ಆಗಿದ್ದು ವಿಶೇಷ ಚರ್ಚೆಗೆ ಗ್ರಾಸವಾಗಿದೆ. ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ವೀಡಿಯೊ ಕುರಿತು ಮೊಕದ್ದಮೆ ದಾಖಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ.
ಈ ಘಟನೆಯು ಉಜಿರೆಯ ಎಸ್ಡಿಎಂ ಪಿಯು ಕಾಲೇಜು ಮತ ಎಣಿಕಾ ಕೇಂದ್ರದ ಮುಂದೆ ನಡೆದಿದೆ ಎನ್ನಲಾಗಿದೆ.