ಬೆಳಗಾವಿ, ಡಿ.30 (DaijiworldNews/PY): ಚುನಾವಣೆ ನಡೆದ ನಂತರ ಹೃದಯಾಘಾತದಿಂದ ನಿಧನರಾಗಿದ್ದ ಖಾನಾಪುರ ತಾಲೂಕಿನ ಕಕ್ಕೇರಿಯ ಸಿ.ಬಿ. ಆಂಬೋಜಿ (67) ಅವರು ಜಯ ಗಳಿಸಿದ್ದಾರೆ.
ಡಿ.22ರಂದು ಕಕ್ಕೇರಿಯದಲ್ಲಿ ಮೊದಲ ಹಂತದ ಚುನಾವಣೆ ನಡೆದಿತ್ತಿ. ಸಿ.ಬಿ.ಆಂಬೋಜಿ ಅವರು ಡಿ.27ರಂದು ನಿಧನರಾಗಿದ್ದರು. ಚುನಾವಣಾ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಆಂಬೋಜಿ ಅವರು 414 ಮತಗಳ ಪಡೆದಿರುವುದಾಗಿ ತಿಳಿದುಬಂದಿದೆ.
ಆಂಬೋಜಿ ಅವರು ವಕೀಲರಾಗಿದ್ದು, ಅವರು ಐದು ಬಾರಿ ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ಒಂದು ಬಾರಿ ಸೋತಿದ್ದರು. ಅಲ್ಲದೇ ಒಂದು ಬಾರಿ ಗ್ರಾ.ಪಂ ಅಧ್ಯಕ್ಷರೂ ಆಗಿದ್ದರು.