ಬೆಂಗಳೂರು,ಡಿ.30 (DaijiworldNews/HR): ಕರ್ನಾಟಕದಲ್ಲಿ ಬ್ರಿಟನ್ನ ರೂಪಾಂತರಿ ಕೊರೊನಾ ವೈರಸ್ ಹರಡುತ್ತಿದೆ ಹಾಗಾಗಿ ಈಗಾಗಲೇ ಬ್ರಿಟನ್ನಿಂದ ಬಂದಿರುವವರು ಕಣ್ಣು ತಪ್ಪಿಸಿ ಓಡಾಡಬಾರದು, ಮುಖ್ಯಮಂತ್ರಿಯಾಗಿ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಕಳೆದ ಎರಡು ತಿಂಗಳಿನಿಂದ ಬಂದಿರುವವರು ಒಮ್ಮೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿಯೂ ರೂಪಾಂತರ ಕೊರೊನಾ ಸೋಂಕು ಹರಡುತ್ತಿದೆ. ಇದನ್ನು ತಡೆಗಟ್ಟುವುದಕ್ಕಾಗಿ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಕೂಧ ನಿಗಾ ವಹಿಸುತ್ತಿದೆ ಜೊತೆಗೆ ನಾವು ಕೂಡ ಕಟ್ಟೆಚ್ಚರ ವಹಿಸಬೇಕು" ಎಂದರು.
ಇನ್ನು ಕರ್ನಾಟಕದಲ್ಲಿ ಈಗಾಗಲೇ ರೂಪಾಂತರಿತ ಕೊರೊನಾದ ಏಳು ಪ್ರಕರಣಗಳು ಕಂಡುಬಂದಿದೆ, ಅದರಲ್ಲಿ ಮಂಗಳವಾರ ಮೂರು ಪ್ರಕರಣಗಳು ಕಂಡುಬಂದಿದ್ದರೆ, ಬುಧವಾರ ಶಿವಮೊಗ್ಗದ ಒಂದೇ ಕುಟುಂಬದ ನಾಲ್ಕು ಜನರಿಗೆ ದೃಢಪಟ್ಟಿದೆ" ಎಂದು ಹೇಳಿದ್ದಾರೆ.