ಬೆಂಗಳೂರು, ಡಿ.30 (DaijiworldNews/PY): "ಕೊರೊನಾ ಹೆಸರಲ್ಲೂ ಜನರ ದೇಣಿಗೆ ದೋಚುವ ಹೀನ ಬುದ್ದಿ ಬಿಜೆಪಿಗೆ ಮಾತ್ರ ಸಾಧ್ಯ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಬಗ್ಗೆ ಟ್ಟೀಟ್ ಮಾಡಿರುವ ಅವರು, "ಕೊರೊನಾ ಹೆಸರಲ್ಲಿ ಪಿಎಂ-ಕೇರ್ಸ್ಗಾಗಿ ಜನರಿಂದ ಸಂಗ್ರಹಿಸಿದ ದುಡ್ಡಿಗೆ ಅಪ್ಪ-ಅಮ್ಮ ಯಾರು ಎಂದು ಇಡಿ ದೇಶಕ್ಕೆ ಗೊತ್ತಿದೆ. ಕೊರೊನಾ ಹೆಸರಲ್ಲೂ ಜನರ ದೇಣಿಗೆ ದೋಚುವ ಹೀನ ಬುದ್ದಿ ಬಿಜೆಪಿಗೆ ಮಾತ್ರ ಸಾಧ್ಯ. ಬಿಜೆಪಿ ನಾಯಕರಿಗೆ ಕನಿಷ್ಟ ನೈತಿಕತೆ ಹಾಗೂ ಮಾನವಿದ್ದರೆ ಪಿಎಂ ಕೇರ್ಸ್ಗಾಗಿ ಸಂಗ್ರಹಿಸಿದ ಹಣ ಯಾವ ಉದ್ದೇಶಕ್ಕೆ ಎಂದು ಸ್ಪಷ್ಟಪಡಿಸಲಿ" ಎಂದು ಒತ್ತಾಯಿಸಿದ್ದಾರೆ.
ಪಿಎಂ ಕೇರ್ಸ್ ನಿಧಿ ಸ್ಥಾಪನೆಯಾದಾಗಿನಿಂದಲೂ ಕೂಡಾ ವಿರೋಧ ಪಕ್ಷಗಳು ಸೇರಿದಂತೆ ಹೋರಾಟಗಾರರಿಂದ ಟೀಕೆ ವ್ಯಕ್ತವಾಗುತ್ತಿದೆ. ಅಲ್ಲದೇ, ಪಿಎಂ ಕೇರ್ಸ್ ನಿಧಿಯ ನಿರ್ವಹಣೆಯಲ್ಲಿಯೂ ಕೂಡಾ ಪಾರದರ್ಶಕತೆ ಕೊರತೆ ಕೊರತೆ ಎನ್ನುವ ಆರೋಪ ಕೇಳಿ ಬರುತ್ತಿದೆ.