ನವದೆಹಲಿ,ಡಿ.30 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ಹಿಂಪಡೆಯದಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ರೈತರಿಗೆ ನಂಬಿಕೆಯಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ರೈತರಿಗೆ ಅಸತ್ಯಾಗ್ರಹದ ಇತಿಹಾಸದಿಂದಾಗಿ ಮೋದಿ ಮೇಲೆ ನಂಬಿಕೆಯಿಲ್ಲ, 50 ದಿನ ಸಮಯ ನೀಡಿಪ್ರತಿ ವರ್ಷ 2 ಕೋಟಿ ಉದ್ಯೋಗ ಮತ್ತು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಜಮೆ ಮಾಡುವ ಭರವಸೆ ನೀಡಿದ್ದಾರೆ ಅಷ್ಟೇ" ಎಂದರು.
ಇನ್ನು"ಮೋದಿಯವರು ಹೇಳುವ ಎಲ್ಲಾ ಸುಳ್ಳುಗಳಿಂದಾಗಿ ರೈತರು ಅವರ ಮೇಲೆ ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ" ಎಂದು ಹೇಳಿದ್ದಾರೆ.