ಮಡಿಕೇರಿ,ಡಿ.30 (DaijiworldNews/HR): ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಎಮ್ಮೆಗುಂಡಿ ಕ್ಷೇತ್ರದ ಅಭ್ಯರ್ಥಿ ಪುಲಿಯಂಡ ಬೋಪಣ್ಣ ಅವರು ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದು, ಇದೀಗ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಲಿಯಂಡ ಬೋಪಣ್ಣ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯುಸೂಫ್ ವಿರುದ್ಧ 61 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಪುಲಿಯಂಡ ಬೋಪಣ್ಣ ಅವರು ಜಾತಿ ನಿಂದನೆ ಪ್ರಕರಣದಲ್ಲಿ ಇವರು ನ್ಯಾಯಾಂಗ ಬಂಧನದಲ್ಲಿದ್ದ ಕಾರಣ ಅವರಿಗೆ ಖುದ್ದು ನಾಮಪತ್ರ ಸಲ್ಲಿಸಲು ಅವಕಾಶ ಆಗಿರಲಿಲ್ಲ ಹಾಗಾಗಿ ತಮ್ಮ ಬೆಂಬಲಿಗರೊಬ್ಬರು ನಾಮಪತ್ರ ಸಲ್ಲಿಸಿದ್ದರು.
ಬಳಿಕ ಜಾಮೀನು ದೊರಕಿ ಹೊರ ಬಂದ ಬೋಪಣ್ಣ ಎರಡು ದಿನ ಪ್ರಚಾರ ನಡೆಸಿದ್ದರು. ಈ ಹಿಂದೆ ಅವರು 12 ವರ್ಷ ಪಾಲಿಬೆಟ್ಟ ಪಂಚಾಯಿತಿ ಅಧ್ಯಕ್ಷರಾಗಿದ್ದರು.