ಬೆಂಗಳೂರು, ಡಿ. 30 (DaijiworldNews/MB) : ಕರ್ನಾಟಕದಾದ್ಯಂತ ಒಂದೇ ದಿನದಲ್ಲಿ ಹೊಸ 662 ಕೊರೊನಾ ಪ್ರಕರಣಗಳು ದಾಖಲಾಗಿದ್ದು 1,344 ಮಂದಿ ಗುಣಮುಖರಾಗಿದ್ದಾರೆ.
"ದಿನದಲ್ಲಿ 1,344 ರೋಗಿಗಳು ಬಿಡುಗಡೆಯಾಗಿದ್ದು ಚೇತರಿಕೆ ಪ್ರಮಾಣವು 8,93,617 ಕ್ಕೆ ಏರಿಕೆಯಾಗಿದೆ. ಸೋಮವಾರ 662 ಹೊಸ ಪ್ರಕರಣಗಳು ದಾಖಲಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,17,571 ಕ್ಕೆ ಏರಿದೆ. ಈ ಪೈಕಿ 11,861 ಪ್ರಕರಣಗಳು ಸಕ್ರಿಯವಾಗಿದೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ಮಂಗಳವಾರ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕೇವಲ 4 ಮಂದಿ ಸೋಂಕಿಗೆ ಬಲಿಯಾಗಿದ್ದು ಈವರೆಗೂ ರಾಜ್ಯದಲ್ಲಿ 12,074 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಇಲ್ಲಿಯವರೆಗೆ ಯುಕೆ ಹಿಂದಿರುಗಿದ 1,903 ಜನರಲ್ಲಿ 29 ಮಂದಿಗೆ ಪಾಸಿಟಿವ್ ಆಗಿದ್ದು 1,599 ನೆಗೆಟಿವ್ ಆಗಿದೆ. 275 ಜನರ ವರದಿ ಇನ್ನಷ್ಟೇ ಲಭಿಸಬೇಕಿದೆ ಎಂದು ಇಲಾಖೆ ತಿಳಿಸಿದೆ.