ಶ್ರೀನಗರ, ಡಿ.30 (DaijiworldNews/HR): ಭದ್ರತಾ ಪಡೆಯು ಜಮ್ಮು ಮತ್ತು ಕಾಶ್ಮೀರದ ಪರಿಂಪೋರ ಪ್ರದೇಶದಲ್ಲಿ ಎನ್ಕೌಂಟರ್ ನಡೆಸಿ ಉಗ್ರನೊಬ್ಬ ಹತ್ಯೆಗೈದ ಘಟನೆ ನಡೆದಿದೆ.
ಮಂಗಳವಾರ ಸಂಜೆ ಭದ್ರತಾ ಪಡೆಯು ಪರಿಂಪೋರದಲ್ಲಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಉಗ್ರರು ಭದ್ರತಾ ಪಡೆ ಮೇಲೆ ಮೊದಲು ದಾಳಿ ನಡೆಸಿದ್ದರು. ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಮಂಗಳವಾರ ರಾತ್ರಿ ಇಡೀ ಗುಂಡಿನ ಚಕಮಕಿ ನಡೆದು ಉಗ್ರನೊಬ್ಬ ಹತ್ಯೆಯಾಗಿದ್ದು, ಈಗಲೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಿದ್ದಾರೆ.