ನವದೆಹಲಿ,ಡಿ.30 (DaijiworldNews/HR): ರೈತರು ದೇಶದ ಬೆನ್ನೆಲುಬು ಹೀಗಿರುವಾಗ ಪ್ರತಿಭಟನಾ ನಿರತ ರೈತರನ್ನು ನಕ್ಸಲೀಯರು ಅಥವಾ ಖಲಿಸ್ತಾನಿಯರು ಎಂದು ಕೆಟ್ಟದಾಗಿ ಉಲ್ಲೇಖಿಸಿ ಅವರ ವಿರುದ್ಧ ಹಗುರವಾಗಿ ಮಾತನಾಡಬಾರದು, ಸರ್ಕಾರ ಕೂಡ ಅನ್ನದಾತರ ವಿರುದ್ಧ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ನಾನು ರೈತರ ಏಳಿಗೆಗಾಗಿ ಅವರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಮಸೂದೆಯನ್ನು ಜಾರಿಗೊಳಿಸಿದ್ದೇವೆ. ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ಸರ್ಕಾರಕ್ಕೆ ತೀವ್ರ ಬೇಸರವಾಗಿದೆ" ಎಂದರು.
ಇನ್ನು "ಪ್ರತಿಭಟಿಸುತ್ತಿರುವ ರೈತರನ್ನು ನಕ್ಸಲರು, ಖಲಿಸ್ತಾನೀಯರು ಎಂದು ಯಾರೂ ಕೂಡ ಆರೋಪಿಸಬಾರದು. ರೈತರರು ನಮ್ಮ ದೇಶದ ಬೆನ್ನೆಲುಬು ಅವರ ಬಗ್ಗೆ ನಾವು ಗೌರವ ತೋರಿಸಬೇಕು. ದೇಶದ ವಿಚಾರ ಬಂದಾಗ ಸೈನಿಕರು ಮತ್ತು ರೈತರು ಎಂದ ಕೂಡಲೇ ನಮ್ಮ ತಲೆಬಾಗಬೇಕು. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸರ್ಕಾರ ಜೊತೆಗೆ ತಾತ್ವಿಕ ಚರ್ಚೆಗೆ ಮುಂದಾಗಬೇಕು" ಎಂದು ಹೇಳಿದ್ದಾರೆ.