ದಾಂತೇವಾಡ, ಡಿ. 29(DaijiworldNews/HR): ಎಂಟು ಮಂದಿ ನಕ್ಸಲರು ಶರಣಾದ ಘಟನೆ ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ಮಂಗಳವಾರ ನಡೆದಿದ್ದು, ಅದರಲ್ಲಿ ನಾಲ್ವರು ಕಳೆದ ವರ್ಷ ನಡೆದಿದ್ದ ಬಿಜೆಪಿ ಶಾಸಕನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಸಾಂಧರ್ಭಿಕ ಚಿತ್ರ
ಮಾವೊವಾದಿ ಸಿದ್ದಾಂತದ ವಿರುದ್ಧ ಅಸಮಾಧಾನಗೊಂಡು ದಕ್ಷಿಣ ಬಸ್ತಾರ್ ಭಾಗದಲ್ಲಿ ಕಾರ್ಯನಿರತವಾಗಿದ್ದ ನಕ್ಸಲರು ಸಿಆರ್ಪಿಎಫ್ನ ಹಿರಿಯ ಅಧಿಕಾರಿಗಳ ಎದುರು ಶರಣಾಗಿದ್ದಾರೆ.
ಇನ್ನು ಶರಣಾದವರ ಪೈಕಿ ಆಯ್ಟು ಭಾಸ್ಕರ್ (25) ಸೆಕ್ಷನ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈತನ ಬಗ್ಗೆ ಸುಳಿವು ನೀಡಿದವರಿಗೆ 3 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.