ಪಶ್ಚಿಮ ಬಂಗಾಳ, ಡಿ. 29(DaijiworldNews/HR): "ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಠ್ಯಾಗೋರ್ ಅವರ ಈ ಭೂಮಿ ಎಂದಿಗೂ ಜಾತ್ಯತೀತತೆಯ ಮೇಲೆ ದ್ವೇಷದ ರಾಜಕಾರಣ ಸವಾರಿ ಮಾಡಲು ಬಿಡುವುದಿಲ್ಲ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, "ವಿಶ್ವಭಾರತಿ ಕುಲಪತಿ ಬಿದ್ಯುತ್ ಚಕ್ರವರ್ತಿ ಅವರು ಬಿಜೆಪಿ ವ್ಯಕ್ತಿ, ಅವರು ಕ್ಯಾಂಪಸ್ನಲ್ಲಿ ಕೋಮುವಾದಿ ರಾಜಕಾರಣ ಬೆಳೆಸುವ ಮೂಲಕ ಸಂಸ್ಥೆಯ ಶ್ರೀಮಂತ ಪರಂಪರೆಗೆ ಚ್ಯುತಿತರುತ್ತಿದ್ದಾರೆ" ಎಂದರು.
ಇನ್ನು "ಮಹಾತ್ಮಗಾಂಧಿ ಮತ್ತು ದೇಶದ ಇತರ ಮಹನೀಯರನ್ನು ಗೌರವಿಸದವರು ಈಗ ಚಿನ್ನದ ಬಂಗಾಳವನ್ನು ಸೃಷ್ಟಿಸುವ ಮಾತು ಆಡುತ್ತಿದ್ದಾರೆ. ರವೀಂದ್ರನಾಥ ಠ್ಯಾಗೋರ್ ಅವರು ಈಗಾಗಲೇ ಹಲವು ದಶಕಗಳ ಹಿಂದೆಯೇ ಚಿನ್ನದ ಬಂಗಾಳವನ್ನು ಸೃಷ್ಟಿಸಿದ್ದಾರೆ" ಎಂದು ಹೇಳಿದ್ದಾರೆ.