ಚೆನ್ನೈ,ಡಿ.29(DaijiworldNews/HR): ಸೂಪರ್ಸ್ಟಾರ್ ನಟ ರಜನಿಕಾಂತ್ ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ಹೊಸ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಲು ಹಿಂಜರಿದಿದ್ದಾರೆ.
ರಜನಿಕಾಂತ್ ನೇತೃತ್ವದ ಹೊಸ ರಾಜಕೀಯ ಪಕ್ಷಕ್ಕೆ 2021ರ ಜನವರಿಯಲ್ಲಿ ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಅಭಿಮಾನಿಗಳಿಗೆ ಪತ್ರ ಬರೆದು ತಾವು ನೀಡಿರುವ ಭರವಸೆಯಿಂದ ಹಿಂಜರಿದಿದ್ದಾಗಿ ಕ್ಷಮೆ ಕೋರಿದ್ದಾರೆ.
ರಜನಿ ಕಾಂತ್ ಅವರಿಗೆ ವೈದ್ಯರು ಒಂದು ವಾರದ ಸಂಪೂರ್ಣ ವಿಶ್ರಾಂತಿಯನ್ನು ವೈದ್ಯರು ಸಲಹೆ ನೀಡಿದ್ದು, ಈ ಮಧ್ಯೆ ರಾಜಕೀಯ ಪ್ರವೇಶದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.
ಇನ್ನು "ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಮೂಲಕ ರಾಜಕೀಯಕ್ಕೆ ಧುಮುಕಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಘೋಷಿಸಲು ವಿಷಾದಿಸುತ್ತೇನೆ. ಇದನ್ನು ಘೋಷಿಸುವಾಗ ನನ್ನ ನೋವಿನ ಆಳ ನನಗೆ ಮಾತ್ರ ತಿಳಿದಿದ್ದು, ಈ ನಿರ್ಧಾರದಿಂದ ನನ್ನ ಅಭಿಮಾನಿಗಳು ಹಾಗೂ ಜನರಿಗೆ ನಿರಾಸೆಯಾಗಿದೆ. ನಾನು ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.