ನವದೆಹಲಿ, ಡಿ.29(DaijiworldNews/HR): ಹೊಸ ವರ್ಷದ ಮೋಜಿಗಾಗಿ ಹಣ ಕೊಡಲು ಅಜ್ಜಿಯು ನಿರಾಕರಿಸಿದ್ದು, ಆಕೆಯ ತಲೆಗೆ ಮೊಮ್ಮಗ ಸುತ್ತಿಗೆಯಿಂದ ಹೊಡೆದು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಸತೀಶ್ ಕುಮಾರಿ (73ವರ್ಷ) ಅವರು ಕುರ್ಚಿಯಲ್ಲಿ ಕುಳಿತಿದ್ದು, ತಲೆ ಒಡೆದು ರಕ್ತದ ಮಡುವಿನಲ್ಲಿ ಸುತ್ತಿಗೆ ಬಿದ್ದಿರುವುದು ಕಂಡು ಬಂದಿರುವುದಾಗಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತಿಳಿಸಿದ್ದಾರೆ.
ಶಾದಾರಾ ಪ್ರದೇಶದ ರೋಹ್ತಾಶ್ ನಗರದಲ್ಲಿನ ಮನೆಯ ಕೆಳ ಅಂತಸ್ತಿನಲ್ಲಿ ಸತೀಶ ಕುಮಾರಿ ವಾಸವಾಗಿದ್ದು, ಮೊದಲ ಅಂತಸ್ತಿನ ಮಹಡಿಯಲ್ಲಿ ಹಿರಿಯ ಪುತ್ರ ಹಾಗೂ ಎರಡನೇ ಪುತ್ರ ಮನೋಜ್ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ತಾಯಿಯ ಕೋಣೆಯ ಹೊರ ಬಾಗಿಲಿಗೆ ಬೀಗ ಹಾಕಲಾಗಿದ್ದನ್ನು ಗಮನಿಸಿದ ಮಕ್ಕಳು ಬೀಗ ಒಡೆದು ಮನೆಯೊಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇನ್ನು ಐಪಿಸಿ ಸೆಕ್ಷನ್ 302ರ ಪ್ರಕಾರ ಆರೋಪಿ ಮೊಮ್ಮಗ ಕರಣ್ (19) ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.