ಮುಂಬೈ, ಡಿ.29(DaijiworldNews/HR): ರಿಪಬ್ಲಿಕ್ ಸುದ್ದಿ ವಾಹಿನಿಯ ಸಂಪಾದಕ ಅರ್ನಬ್ ಗೋಸ್ವಾಮಿ ಟಿಆರ್ಪಿ ತಿದ್ದಲು ನನಗೆ ಲಂಚ ಕೊಟ್ಟದ್ದು ನಿಜ ಎಂದು ಟಿಆರ್ಪಿ ಹಗರಣದಲ್ಲಿ ಬಂಧಿತನಾಗಿರುವ ಬಾರ್ಕ್ನ ಮಾಜಿ ಸಿಇಓ ಪಾರ್ಥ ದಾಸ್ ಗುಪ್ತಾ ಪೊಲೀಸ್ ತನಿಖೆಯ ವೇಳೆ ತಿಳಿಸಿದ್ದಾರೆ.
ಪೊಲೀಸ್ ವಿಚಾರನೆಯ ವೇಳೆ ಪಾರ್ಥ ದಾಸ್ ಗುಪ್ತಾ ಅವರು, "ತಮ್ಮ ಚಾನೆಲ್ಗೆ ಅಧಿಕ ಟಿಆರ್ಪಿ ನೀಡುವುದಕ್ಕಾಗಿ ಲಕ್ಷಾಂತರ ರೂಪಾಯಿ ನಗದು ಹಾಗೂ ದುಬಾರಿ ವಾಚು ನೀಡಿದ್ದರು"ಎಂದು ತಿಳಿಸಿದ್ದಾರೆ.
ಇನ್ನು ಗುಪ್ತಾ ಮನೆಯಿಂದ ಮೂರು ಕೆಜಿ ಬೆಳ್ಳಿಯನ್ನು ಮುಂಬೈ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
2013ರಿಂದ 2019ರವರೆಗೆ ದಾಸ್ಗುಪ್ತಾ ಬಿಎಆರ್ಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ಅರ್ನಬ್ ಗೋಸ್ವಾಮಿ ರಿಪಬ್ಲಿಕ್ ವಾಹಿನಿಗೆ ಟಿಆರ್ಪಿ ನೆರವು ನೀಡಲು ನೀಡಿದ ಲಂಚದ ಹಣದಲ್ಲಿ ಈ ಬೆಳ್ಳಿ ಖರೀದಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.