ಪಟ್ನಾ, ಡಿ.28 (DaijiworldNews/HR): ನನಗೆ ಬಿಹಾರದ ಮುಖ್ಯಮಂತ್ರಿಯಾಗಬೇಕೆಂಬುವ ಯಾವ ಆಸೆ ಇರಲಿಲ್ಲ, ಬಿಜೆಪಿಯು ತನ್ನದೇ ಆದ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಬಹುದಿತ್ತು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿರುವ ಅವರು, "ವಿಧಾನಸಭೆ ಫಲಿತಾಂಶ ಹೊರಬಂದ ಬಳಿಕ ಮುಖ್ಯಮಂತ್ರಿ ಆಗಬೇಕೆಂಬ ಬಯಕೆ ನನಗಿರಲಿಲ್ಲ. ಜನರು ತಮ್ಮ ಆದೇಶವನ್ನು ನೀಡಿದ್ದರು. ಆ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನದೇ ಆದ ಅಭ್ಯರ್ಥಿಯನ್ನು ಬಿಹಾರ ಮುಖ್ಯಮಂತ್ರಿ ಹುದ್ದೆಗೆ ನೇಮಿಸಬಹುದಿತ್ತು" ಎಂದರು.
ಇನ್ನು "ಚುನಾವಣಾ ಫಲಿತಾಂಶ ಬಂದ ಬಳಿಕ ನಾನು ನನ್ನ ಆಸೆಗಳನ್ನು ಬಿಜೆಪಿಗೆ ತಿಳಿಸಿದೆ. ಆದರೆ, ನನ್ನ ಮೇಲಿನ ಒತ್ತಡವು ತೀವ್ರವಾಗಿತ್ತು. ಆ ಕಾರಣ, ನಾನು ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಲೇಬೇಕಾಯಿತು" ಎಂದು ಹೇಳಿದ್ದಾರೆ.