ಶಿವಮೊಗ್ಗ,ಡಿ.28 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳು ಅಂಬಾನಿ ಮತ್ತು ಅದಾನಿ ಪರವಾಗಿವೆ ಎಂದು ಆರೋಪಿಸಿ ರೈತ ಸಂಘದ ಅನೇಕ ಕಾರ್ಯಕರ್ತರು ಜಿಯೋ ಸಿಮ್ನಿಂದ ಏರ್ಟೆಲ್ ಸಿಮ್ಗೆ ಪೋರ್ಟ್ ಆಗುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ರೈತ ಹೋರಾಟದ ಬೆಂಬಲವಾಗಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ನೇತೃತ್ವದಲ್ಲಿ ಇಂದು ನೂರಾರು ಕಾರ್ಯಕರ್ತರು ನಗರದ ಶಿವಮೂರ್ತಿ ಸರ್ಕಲ್ನಲ್ಲಿರುವ ಏರ್ಟೆಲ್ ಕಚೇರಿಗೆ ತೆರಳಿ ಜಿಯೋ ಸಿಮ್ನಿಂದ ಏರ್ಟೆಲ್ ಸಿಮ್ಗೆ ಪೋರ್ಟ್ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.
ಇನ್ನು "ಜಿಯೋ ಸಿಮ್ ಅತ್ಯಂತ ಕಡಿಮೆ ಅವಧಿಯಲ್ಲಿ ದೇಶಾದ್ಯಂತ ಅನೇಕ ಚಂದಾದಾರರನ್ನು ಹೊಂದಿದೆ. ಜಿಯೋ ಸಿಮ್ ನ ಕಡಿಮೆ ಬೆಲೆಯ ಆಫರ್ಗಳು ಏರ್ಟೆಲ್, ಬಿ.ಎಸ್.ಎನ್.ಎಲ್ ನಂತಹ ಕಂಪನಿಗಳಿಗೆ ಹೊಡೆತ ನೀಡಿತ್ತು. ಅದೇ ಮಾದರಿಯಲ್ಲಿಯೇ ಜಿಯೋ ಸಿಮ್ನಿಂದ ಏರ್ಟೆಲ್ಗೆ ಪೋರ್ಟ್ ಆಗುವ ಮೂಲಕ ಅಂಬಾನಿ, ಆದಾನಿ ವ್ಯವಹಾರದ ಮೇಲೆ ಹೊಡೆತ ಕೂಡುವುದಾಗಿ" ರೈತರು ತಿಳಿಸಿದ್ದಾರೆ.