ಬೆಂಗಳೂರು, ಡಿ.28 (DaijiworldNews/PY): ಕೃಷಿ ಕಾನೂನು ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ, "ಈ ಕಾಂಗ್ರೆಸ್ ಪಕ್ಷದ ನಾಯಕರ ಬುದ್ಧಿಗೆ ಯಾವ ದಾರಿದ್ರ್ಯ ಮೆಟ್ಟಿಕೊಂಡಿದೆಯೋ ದೇವರೇ ಬಲ್ಲ" ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಈ ಕಾಂಗ್ರೆಸ್ ಪಕ್ಷದ ನಾಯಕರ ಬುದ್ಧಿಗೆ ಯಾವ ದಾರಿದ್ರ್ಯ ಮೆಟ್ಟಿಕೊಂಡಿದೆಯೋ ದೇವರೇ ಬಲ್ಲ. ಈ ಹಿಂದೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಕೃಷಿ ಕಾಯ್ದೆ ಕುರಿತು ಧನಾತ್ಮಕವಾಗಿ ಮಾತಾಡಿದ್ದರು. ಈಗ ವಿರೋಧಿಸುತ್ತಿದ್ದಾರೆ. 60% ಕ್ಕೂ ಅಧಿಕ ದಲಿತರಿಗೆ ವರವಾಗುವ ಸಿಎಎ ಕಾನೂನನ್ನು ಕಾಂಗ್ರೆಸ್ ಏಕೆ ವಿರೋಧಿಸುತ್ತದೆ? ದಲಿತ ವಿರೋಧಿ ಕಾಂಗ್ರೆಸ್" ಎಂದು ಆರೋಪಿಸಿದೆ.
"ಕಾಂಗ್ರೆಸ್ ಉಳುವವನನ್ನೇ ಭೂಮಿಯ ಒಡೆಯನಾಗಿ ಮಾಡಿತು. ಇಂದು ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ರೈತರನ್ನು ಗುಲಾಮರನ್ನಾಗಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಮೇಲೆ ದೇಶ ಕಟ್ಟಿತು. ಇಂದು ಸಿಎಎ, ಎನ್.ಆರ್.ಸಿ ಮೂಲಕ ಧರ್ಮಾರಿತ ದೇಶ ಮಾಡುವ ಪ್ರಯತ್ನ ನಡೆದಿದೆ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.