ಪಾಟ್ನಾ, ಡಿ.28 (DaijiworldNews/HR): ಬಿಜೆಪಿ ಆಡಳಿತದ ರಾಜ್ಯಗಳು ವಿವಾಹದ ಉದ್ದೇಶಕ್ಕೆ ನಡೆಯುವ ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸಿದ್ದು ಇದರಿಂದ ಸಮಾಜದಲ್ಲಿ ದ್ವೇಷದ ಭಾವನೆ ಬಿತ್ತುವುದಲ್ಲದೆ ಸಮಾಜದ ವಿಭಜನೆಗೂ ಕಾರಣವಾಗುತ್ತದೆ ಹಾಗಾಗಿ ಈ ಕಾನೂನಿಗೆ ನಮ್ಮ ಬೆಂಬಲವಿಲ್ಲ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ''ಲವ್ ಜಿಹಾದ್ ಎಂಬ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದ್ದು, ಜೆಡಿಯು ಇದಕ್ಕೆ ಬೆಂಬಲ ನೀಡುವುದಿಲ್ಲ" ಎಂದರು.
ಇನ್ನು"ಇಬ್ಬರು ಮದುವೆ ಬಂದ ವಯಸ್ಸಿನ ವ್ಯಕ್ತಿಗಳಿಗೆ ತಮ್ಮ ಜೀವನ ಸಂಗಾತಿಗಳನ್ನು ಅವರ ಜಾತಿ, ಧರ್ಮ ಹಾಗೂ ಪ್ರಾಂತ್ಯವನ್ನು ಲೆಕ್ಕಿಸದೆ ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ" ಎಂದು ಹೇಳಿದ್ದಾರೆ.