ನವದೆಹಲಿ, ಡಿ.28 (DaijiworldNews/PY): ದೆಹಲಿ ಮೆಟ್ರೋದ ಮೆಜೆಂತಾ ಮಾರ್ಗದಲ್ಲಿ ಭಾರತದ ಮೊದಲ ಚಾಲಕರಹಿತ ಮೆಟ್ರೋ ರೈಲು ಕಾರ್ಯಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು.
ಭಾರತದ ಮೊದಲ ಚಾಲಕರಹಿತ ರೈಲಿನ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಮಾನ ನಿಲ್ದಾಣ ಎಕ್ಸ್ಪ್ರೆಸ್ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿರುವ ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ ಅನ್ನು ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, "ಮೇಕ್ ಇನ್ ಇಂಡಿಯಾವು ಮೆಟ್ರೋ ಸೇವೆಯ ವಿಸ್ತರಣೆಗೆ ಪ್ರಮುಖವಾದ ವೇದಿಕೆಯಾಗಿದೆ. ವೆಚ್ಚವನ್ನು ಇದು ಕಡಿಮೆ ಮಾಡುತ್ತದೆ. ಅಲ್ಲದೇ, ಭಾರತೀಯ ಜನರಿಗೂ ಕೂಡಾ ಇದು ಹೆಚ್ಚಿನ ಉದ್ಯೋಗ ಒದಗಿಸುತ್ತದೆ" ಎಂದರು.
ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪಾಲ್ಗೊಂಡಿದ್ದರು.