ಬಾಗಲಕೋಟೆ, ಡಿ. 28 (DaijiworldNews/MB) : "ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ಸಲುವಾಗಿ ಕೂದಲು ಮತ್ತು ಗಡ್ಡವನ್ನು ಬೆಳೆಸಿರಬೇಕು" ಎಂದು ಅಯೋಧ್ಯೆಯ ಶ್ರೀ ರಾಮ ಮಂದಿರ ಟ್ರಸ್ಟ್ನ ಸದಸ್ಯ ಮತ್ತು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಡಿಸೆಂಬರ್ 27 ರ ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, "ಪಿಎಂ ಮೋದಿ ಆಧ್ಯಾತ್ಮಿಕತೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಹಿಂದೂ ಧರ್ಮದಲ್ಲಿ 'ದೀಕ್ಷಾ ಬುದ್ಧ' ಎಂದು ಕರೆಯುತ್ತಾರೆ. ರಾಮ ಮಂದಿರಕ್ಕೆ ಶಿಲಾನ್ಯಾಸ ಹಾಕುವುದರ ಮೂಲಕ ಮೋದಿ ರಾಮ ಮಂದಿರ ನಿರ್ಮಾಣದ ನೈತಿಕ ಜವಾಬ್ದಾರರಾಗಿದ್ದಾರೆ'' ಎಂದು ಹೇಳಿದರು.
"ರಾಮ ಮಂದಿರವನ್ನು ಮೂರೂವರೆ ವರ್ಷಗಳಲ್ಲಿ 1,500 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಅಂದಾಜಿಸಲಾಗಿದೆ. ನಿಜವಾಗಿ ಮಂದಿರದ ನಿರ್ಮಾಣಕ್ಕಾಗಿ 500 ಕೋಟಿ ವ್ಯಯಿಸಲಾಗುತ್ತದೆ. 1,000 ಕೋಟಿಯನ್ನು ಪರಿಸರ ಅಭಿವೃದ್ದಿ, ಯಾತ್ರಾರ್ಥಿಗಳಿಗೆ ವಸತಿ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ವ್ಯಯಿಸಲಾಗುವುದು'' ಎಂದು ತಿಳಿಸಿದರು.