ಬೆಂಗಳೂರು, ಡಿ.28 (DaijiworldNews/PY): "ಜ.1ರಿಂದ ಶಾಲಾ-ಕಾಲೇಜು ಪ್ರಾರಂಭಿಸುತ್ತೇವೆ. ಆದರೂ ಕೂಡಾ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸಚಿವ ಸಂಪುಟಕ್ಕೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂಪುಟ ಸಭೆಯಲ್ಲಿ ಜ.1ರಿಂದ ಶಾಲಾ-ಕಾಲೇಜು ಆರಂಭ ಮಾಡುವ ಬಗ್ಗೆ ಚರ್ಚೆ ಮಾಡಲಾಗುವುದು" ಎಂದರು.
ಗ್ರಾ.ಪಂ. ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾ.ಪಂ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಕೈ ಪಕ್ಷಕ್ಕೆ ಉತ್ಸಾಹವಿಲ್ಲ ಎಂದು ತಿಳಿಯುತ್ತದೆ" ಎಂದು ಹೇಳಿದರು.
"ಅಧಿಕಾರ ವಿಕೇಂದ್ರೀಕರಣದ ವೇಳೆ ಗ್ರಾ.ಪಂ ಚುನಾವಣೆಗೆ ಹಲವಾರು ವಿದ್ಯಾವಂತರು ಸ್ಪರ್ಧಿಸಿದ್ದಾರೆ. ಶೇ 95ರಷ್ಟು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಕೈ ಪಕ್ಷದ ಯಾವುದೇ ನಾಯಕರಿಗೂ ಕೂಡಾ ಚುನಾವಣೆಯಲ್ಲಿ ಉತ್ಸಾಹವಿಲ್ಲ. ಮುಂದೆ ಪಂಚಾಯತ್ಗೆ ಆಯ್ಕೆಯಾಗುವಂತ ಸದಸ್ಯರಿಗೆ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತೇವೆ" ಎಂದರು.