ಕೊಲ್ಕತ್ತಾ, ಡಿ.28 (DaijiworldNews/HR): ಬಂಗಾಳಿಗರಿಗೆ ಬಿಜೆಪಿ ಮಾಡಿದ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಮರ್ತ್ಯ ಸೇನ್ ಅವರಿಗೆ ಮಾಡಿದ ಅವಮಾನ ಎಲ್ಲ ಬಂಗಾಳಿಗಳಿಗೆ ಮಾಡಿದ ಅವಮಾನ ಎಂಬ ಫಲಕಗಳನ್ನು ಹಿಡಿದು ವಿವಿಧ ಕ್ಷೇತ್ರಗಳ ಗಣ್ಯರು ಪ್ರತಿಭಟನೆ ನಡೆಸಿದ್ದಾರೆ.
ವಿಶ್ವಭಾರತಿ ಆವರಣದಲ್ಲಿ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅಕ್ರಮ ಜಮೀನು ಹೊಂದಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಸೇನ್ ಅವರನ್ನು ಬೆಂಬಲಿಸಿ ಹಾಗೂ ಕೇಂದ್ರೀಯ ವಿವಿ ಧೋರಣೆಯನ್ನು ಖಂಡಿಸಿ ಪ್ರತಿಭಟಿಸಿದ್ದಾರೆ.
ಇನ್ನು "ಬಂಗಾಳಿಗರಿಗೆ ಬಿಜೆಪಿ ಮಾಡಿದ ಅವಮಾನವನ್ನು ಎಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಮರ್ತ್ಯ ಸೇನ್ ಅವರಿಗೆ ಮಾಡಿದ ಅವಮಾನ ಎಲ್ಲ ಬಂಗಾಳಿಗಳಿಗೆ ಮಾಡಿದ ಅವಮಾನವಾಗಿದೆ" ಎಂದು ಪ್ರತಿಭಟನೆ ನಡೆಸಿದ್ದಾರೆ.
ವಿಶ್ವಭಾರತಿ ಇತ್ತೀಚೆಗೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪತ್ರ ಬರೆದು ಸಂಸ್ಥೆಯ ಭೂಮಿಯನ್ನು ಅಮರ್ತ್ಯ ಸೇನ್ ಸೇರಿದಂತೆ ಹಲವು ಮಂದಿ ಖಾಸಗಿಯವರಿಗೆ ದಾಖಲೆ ಪತ್ರ ಮಾಡಿಕೊಡಲಾಗಿದೆ ಎಂದು ಆಪಾದಿಸಿತ್ತು. ಕ್ಯಾಂಪಸ್ನಲ್ಲಿ ತಮ್ಮ ಸ್ವಾಧೀನದಲ್ಲಿರುವ ಜಮೀನನ್ನು ಧೀರ್ಘಾವಧಿ ಲೀಸ್ ಮೇಲೆ ನೀಡಲಾಗಿದೆ. ಈ ಲೀಸ್ ಅವಧಿ ಮುಕ್ತಾಯದ ಹಂತದಲ್ಲಿದೆ ಎಂದು ಸೇನ್ ಸ್ಪಷ್ಟನೆ ನೀಡಿದ್ದರು.