ಚಿಕ್ಕಮಗಳೂರು,ಡಿ.28 (DaijiworldNews/HR): ಇವರೇ ನಿಮ್ಮ ತಂದೆ ಎಂದು ತಾಯಿ ಹೇಳಿದಾಗ ನಂಬುತ್ತಾರೆ ಸಾಕ್ಷಿ ಕೇಳುವುದಿಲ್ಲ, ಆದರೆ ಕೆಲವು ಸಾಕ್ಷಿ ಕೇಳುವ ಮನಸ್ಥಿತಿಯ ಜನರೂ ಕೂಡ ಇದ್ದಾರೆ. ಸಿದ್ದರಾಮಯ್ಯ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅವರ ದೋಷ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿದ್ದುಗೆ ಟಾಂಗ್ ನೀಡಿದ್ದಾರೆ.
ಹನುಮ ಹುಟ್ಟಿದ್ದು ಗೊತ್ತಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಿ.ಟಿ.ರವಿ, "ಕೆಲವರಿಗೆ ಎಲ್ಲವನ್ನು ಕೂಡ ಅನುಮಾನದಿಂದಲೇ ನೋಡುತ್ತಾರೆ, ಅಂತವರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ನಂಬಿಕೆ ಎಲ್ಲವನ್ನೂ ಮೀರಿದ್ದಾಗಿದ್ದು, ಜಗತ್ತು ನಂಬಿಕೆಗಳ ಮೇಲೆ ನಿಂತಿರುವುದು. ಕೆಲವರಿಗೆ ದೇವರು ಕಾಣುವುದಿಲ್ಲ ಆದರೆ ಇನ್ನು ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ. ನೋಡುವ ದೃಷ್ಟಿ ಇರುವಂತವರಿಗೆ ಭಗವಂತನನ್ನು ತೋರಿಸಬಹುದು, ಆದರೆ ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತವ ಕಾಣಿಸುವುದಿಲ್ಲ" ಎಂದರು.
ಇನ್ನು "ಸಿದ್ದರಾಮಯ್ಯನವರಿಗೆ ನಂಬಿಕೆ ಎನ್ನುವಂತಹದು ಹುಟ್ಟಿನಿಂದ ಬಂದಿರುವುದಲ್ಲಅದು ಸಹವಾಸ ದೋಷದಿಂದ ಬಂದಿರುವುದು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರುವುದರಿಂದ ದೇವರ ಹೆಸರಿಟ್ಟರು. ಸಹವಾಸ ದೋಷದಿಂದ ಅವರು ಕೆಟ್ಟಿದ್ದಾರೆ" ಎಂದು ಹೇಳಿದ್ದಾರೆ.