ಅಜ್ಮೀರ್, ಡಿ. 28 (DaijiworldNews/MB) : ಬಾಲಿವುಡ್ ಸಿನೆಮಾಗಳಲ್ಲಿ ರೋಮ್ಯಾಂಟಿಕ್ ಹೀರೋಗಳು ನಕ್ಷತ್ರಗಳು ಮತ್ತು ಚಂದ್ರನನ್ನು ನೀಡುವ ಭರವಸೆ ನೀಡುತ್ತಾರೆ. ಆದರೆ ರಿಯಲ್ ಸ್ಟೋರಿಯಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ವಿವಾಹ ಮಹೋತ್ಸವದಂದು ತನ್ನ ಪತ್ನಿಗೆ ಗ್ರಹದ 3 ಎಕರೆ ಜಾಗವನ್ನು ಉಡುಗೊರೆಯಾಗಿ ನೀಡಿದ್ದಾನೆ.
ಹೌದು ಅಜ್ಮೀರ್ನ ಈ ವ್ಯಕ್ತಿಯು ತನ್ನ ಉಡುಗೊರೆಯು ವಿಭಿನ್ನವಾಗಿರಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯ ಮಾಡಿದ್ದಾನೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಧರ್ಮೇಂದ್ರ ಅನಿಜಾ ಎಂಬ ಈ ವ್ಯಕ್ತಿ, ''ನಮ್ಮ ಎಂಟನೇ ವಿವಾಹ ವಾರ್ಷಿಕೋತ್ಸವದಂದು ನನ್ನ ಪತ್ನಿ ಸಪ್ನಾ ಅನಿಜಾಗೆ ಏನಾದರೂ ವಿಶೇಷವಾದ ಉಡುಗೊರೆಯನ್ನು ನೀಡಲು ಬಯಸಿದ್ದರಿಂದ ಚಂದ್ರನ ಮೇಲೆ ಜಾಗವನ್ನು ಖರೀದಿಸಿದ್ದೇನೆ'' ಎಂದು ಹೇಳಿದ್ದಾರೆ.
''ಡಿಸೆಂಬರ್ 24 ರಂದು ನಮ್ಮ ವಿವಾಹ ವಾರ್ಷಿಕೋತ್ಸವವಾಗಿತ್ತು. ನಾನು ಅವಳಿಗೆ ಏನಾದರೂ ವಿಶೇಷವಾದದ್ದನ್ನು ನೀಡಲು ಬಯಸಿದ್ದೆ. ಪ್ರತಿಯೊಬ್ಬರೂ ಕಾರು ಮತ್ತು ಆಭರಣಗಳಂತಹ ಐಹಿಕ ಆಸ್ತಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ನಾನು ಬೇರೆ ಏನನ್ನಾದರೂ ಮಾಡಲು ಬಯಸಿದೆ. ಆದ್ದರಿಂದ, ನಾನು ಅವಳಿಗೆ ಚಂದ್ರನ ಮೇಲೆ ಜಾಗವನ್ನು ಖರೀದಿಸಿದೆ'' ಎಂದು ಹೇಳಿದರು.
ಅಮೇರಿಕಾದ ಕಂಪನಿಯಾದ ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಮೂಲಕ ಧರ್ಮೇಂದ್ರ ಈ ಭೂಮಿಯನ್ನು ಖರೀದಿಸಿದ್ದಾರೆ. ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಒಂದು ವರ್ಷ ತೆಗೆದುಕೊಂಡಿತು ಎಂದು ಅವರು ಹೇಳಿದ್ದಾರೆ.
"ನಾನು ಸಂತೋಷವಾಗಿದ್ದೇನೆ. ಚಂದ್ರನ ಮೇಲೆ ಜಾಗವನ್ನು ಖರೀದಿಸಿದ ರಾಜಸ್ಥಾನದ ಮೊದಲ ವ್ಯಕ್ತಿ ಎಂದು ನಾನು ನಂಬುತ್ತೇನೆ"ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ, ಧರ್ಮೇಂದ್ರ ಅವರ ಪತ್ನಿ ಸಪ್ನಾ ಕೂಡಾ ಈ ಉಡುಗೊರೆಯಿಂದ ಸಂತಸಗೊಂಡಿದ್ದಾರೆ. ಅವರಿಗೆ ಆಶ್ಚರ್ಯವು ಉಂಟಾಗಿದೆ. ಪತಿ ತನಗೆ ಅಂತಹ ವಿಶೇಷವಾದ 'ಪ್ರಪಂಚದಿಂದ ಹೊರಗಿನ' ಉಡುಗೊರೆಯನ್ನು ನೀಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳುತ್ತಾರೆ.
"ನನಗೆ ಬಹಳ ಸಂತೋಷವಾಗಿದೆ. ಅವರು ನನಗೆ ವಿಶೇಷವಾದದ್ದನ್ನು ಉಡುಗೊರೆಯಾಗಿ ನೀಡುತ್ತಾರೆಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಪಾರ್ಟಿಯನ್ನು ವೃತ್ತಿಪರ ಈವೆಂಟ್ ಸಂಘಟಕರು ಆಯೋಜಿಸಿದ್ದರು. ಪಾರ್ಟಿ ಬಹಳ ವಾಸ್ತವಿಕದಂತ್ತಿತ್ತು. ನಾವು ಅಕ್ಷರಶಃ ಚಂದ್ರನ ಮೇಲೆ ಇದ್ದೇವೆ ಎಂದು ಭಾವಿಸಿದೆವು. ಸಮಾರಂಭದಲ್ಲಿ, ಅವರು ನನಗೆ ಆಸ್ತಿಯ ದಾಖಲೆಯನ್ನು ಉಡುಗೊರೆಯಾಗಿ ನೀಡಿದರು" ಎನ್ನುತ್ತಾರೆ ಸಪ್ನಾ
ಕೆಲವು ತಿಂಗಳುಗಳ ಹಿಂದೆ, ಬೋಧ್ ಗಯಾ ನಿವಾಸಿ ನೀರಜ್ ಕುಮಾರ್ ಅವರ ಜನ್ಮದಿನದಂದು ಚಂದ್ರನ ಮೇಲೆ ಒಂದು ಎಕರೆ ಜಾಗವನ್ನು ಖರೀದಿಸಿದ್ದರು.