ನವದೆಹಲಿ,ಡಿ.28 (DaijiworldNews/HR): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ತಮ್ಮ ವೈಯಕ್ತಿಕ ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲಾ, "ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಲ್ಪಾವಧಿಯ ವೈಯಕ್ತಿಕ ಭೇಟಿಗಾಗಿ ವಿದೇಶಕ್ಕೆ ತೆರಳಿದ್ದಾರೆ ಮತ್ತು ಕೆಲವು ದಿನಗಳವರೆಗೆ ಹೊರಗಡೆ ಇರುತ್ತಾರೆ". ಆದರೆ ಎಲ್ಲಿಗೆ ತೆರಳಿದ್ದಾರೆ ಎಂಬ ಪ್ರಶ್ನೆಗೆ ಸುರ್ಜೇವಾಲಾ ಯಾವುದೇ ಮಾಹಿತಿ ಹೊರಹಾಕಿಲ್ಲ.
ಇನ್ನು ಮೂಲಗಳ ಪ್ರಕಾರ ರಾಹುಲ್ ಅವರ ಅಜ್ಜಿ ಇಟಲಿಯಲ್ಲಿ ನೆಲೆಸಿದ್ದು, ಅವರನ್ನು ನೋಡಲು ಬೆಳಿಗ್ಗೆ ಖತಾರ್ ಏರ್ವೇಸ್ ವಿಮಾನದ ಮೂಲಕ ಇಟಲಿಯ ಮಿಲನ್ಗೆ ತೆರಳಿದ್ದಾರೆ ಎನ್ನಲಾಗಿದೆ.