ಪಾಟ್ನಾ, ಡಿ.28 (DaijiworldNews/PY): ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರು ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಬಗ್ಗೆ ಜೆಡಿಯು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಡಿಯು ನಾಯಕ ಕೆ.ಸಿ.ತ್ಯಾಗಿ ಮಾತನಾಡಿ, "ಅರುಣಾಚಲ ಪ್ರದೇಶದಲ್ಲಿ ನಡೆದ ಘಟನೆಯು ಮೈತ್ರಿ ಧರ್ಮಕ್ಕೆ ವಿರುದ್ದವಾಗಿದೆ. ಬಿಜೆಪಿ ಪಕ್ಷದ ಈ ನಡೆಯು ಮೈತ್ರಿ ಧರ್ಮಕ್ಕೆ ವಿರುದ್ದವಾಗಿದೆ. ಬಿಜೆಪಿಯು ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿನ ಮೈತ್ರಿ ರಾಜಕಾರಣವನ್ನು ಪಾಲಿಸಬೇಕಿದೆ" ಎಂದಿದ್ದಾರೆ.
"ಹಳೆ ದ್ವೇಷದ ಸಾಧನೆಗಾಗಿ ಅರುಣಾಚಲದಲ್ಲಿ ಜೆಡಿಯು ಶಾಸಕರನ್ನು ಬಿಜೆಪಿ ತನ್ನತ್ತ ಬರಮಾಡಿಕೊಂಡಿದೆ" ಆರ್ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ ತಿವಾರಿ ಆರೋಪಿಸಿದ್ದಾರೆ.
"ಅರುಣಾಚಲ ಪ್ರದೇಶದಲ್ಲಿ ಜೆಡಿಯುಗೆ ಆಗಿರುವ ಅವಮಾನಕ್ಕೆ ಪ್ರತ್ಯುತ್ತರವಾಗಿ ಬಿಜೆಪಿಯೊಂದಿಗಿನ ಮೈತ್ರಿಯನ್ನು ಆ ಪಕ್ಷವು ತೊರೆಯುದಾದರೆ ನೂತನ ರಾಜಕೀಯ ಸಮೀಕರಣಕ್ಕೆ ಅವಕಾಶವಿದೆ" ಎಂದಿದ್ದಾರೆ.
ದೋರ್ಜಿ ಖರ್ಮ, ಜಿಕ್ಕೆ ಟಾಕೊ, ಹಯೀಂಗ್ ಮಂಗ್ಫಿ, ಡೊಂಗ್ರು ಸಿಯಾಂಗ್ಜು, ತಲೇಮ್ ಟಬೊ ಹಾಗೂ ಕಂಗಾಂಗ್ ಟಕು ಅವರು ಶುಕ್ರವಾರ ಜೆಡಿಯು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.