ಶ್ರೀನಗರ, ಡಿ.28 (DaijiworldNews/PY): "ಚಳಿಗಾಲದ ಪ್ರಾರಂಭದೊಂದಿಗೆ, ಪಾಕ್ ತನ್ನ ಆಂತರಿಕ ಸಮಸ್ಯೆಗಳಿಂದಾಗಿ ತನ್ನ ಗಮನವನ್ನು ಬೇರೆ ಕಡೆ ಸೆಳೆಯುವ ನಿಟ್ಟಿನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ವಿಗ್ನತೆಯನ್ನು ಹೆಚ್ಚಿಸುವಂತ ಹತಾಶ ಯತ್ನಗಳನ್ನು ತಳ್ಳಿಹಾಕುಂತಿಲ್ಲ" ಎಂದು ಹಿರಿಯ ಸೇನಾಧಿಕಾರಿ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಂವಾದವೊಂದರಲ್ಲಿ ಮಾತನಾಡಿದ ಎಕ್ಸ್ವಿ ಕಾರ್ಪ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು, "ಸುಮಾರು 200-250 ಭಯೋತ್ಪಾದಕರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಲಾಂಚ್ ಪ್ಯಾಡ್ಗಳಲ್ಲಿ ಒಳನುಸುಳಲು ಯತ್ನಿಸುತ್ತಿದ್ದಾರೆ ಎನ್ನುವ ಬಗ್ಗೆ ವರದಿಗಳಿವೆ" ಎಂದಿದ್ದಾರೆ.
"ಕಾಶ್ಮೀರದ ಡಿಡಿಸಿ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮತದಾನವು ಶಾಂತಿಯುತವಾಗಿ ನಡೆದಿರುವುದಕ್ಕೆ ಸಂತೋಷವಾಗಿದೆ. ಚುನಾಯಿತ ಪ್ರತಿನಿಧಿಗಳು ಜನರಿಗಾಗಿ ತಮ್ಮ ಕಾರ್ಯವನ್ನು ಮಾಡಬೇಕಾದ ಸಮಯ, ಅಭಿವೃದ್ದಿ ಮಾಡಬೇಕಿದೆ" ಎಂದು ತಿಳಿಸಿದ್ದಾರೆ.
"ಚಳಿಗಾಲದ ಆರಂಭದೊಂದಿಗೆ, ಎಲ್ಒಸಿ ಉದ್ದಕ್ಕೂ ಒಳನುಸುಳುವ ಸಾಧ್ಯತೆಯಿದೆ. ಆದರೆ, ಭದ್ರತಾ ಪಡೆಗಳು ಎಲ್ಒಸಿ ಮೂಲಕ ಕಾಶ್ಮೀರಕ್ಕೆ ಒಳನುಸುಳುವ ಹಾಗೂಪಿರ್ ಪಂಜಾಲ್ನ ದಕ್ಷಿಣದ ಮುಖೇನ ಒಳನುಸುಳುವಿಕೆಯ ಮೇಲೂ ಕೂಡಾ ಗಮನಹರಿಸಲಾಗಿದೆ" ಎಂದಿದ್ದಾರೆ.
"ಪಾಕಿಸ್ತಾನವು ತನ್ನ ಆಂತರಿಕ ಸಮಸ್ಯೆಗಳಿಂದಾಗಿ ತನ್ನ ಗಮನವನ್ನು ಬೇರೆ ಕಡೆ ಸೆಳೆಯುವ ನಿಟ್ಟಿನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಉದ್ವಿಗ್ನತೆಯನ್ನು ಹೆಚ್ಚಿಸುವಂತ ಹತಾಶ ಯತ್ನಗಳನ್ನು ತಳ್ಳಿಹಾಕುಂತಿಲ್ಲ. ಪಾಕಿಸ್ತಾದ ಇಂತಹ ಪ್ರಯತ್ನಗಳಿಗೆ ನಾವು ಸರಿಯಾದ ಉತ್ತರ ನೀಡಲಿದ್ದೇವೆ" ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ಆಂತರಿಕ ರಾಜಕೀಯ ಅಶಾಂತಿಯಿಂದ, ಚಳವಳಿ ಒಕ್ಕೂಟ ನೇತೃತ್ವದಲ್ಲಿ ಇಮ್ರಾನ್ ಖಾನ್ ಸರ್ಕಾರಕ್ಕೆ ಮುಂದಿನ ವರ್ಷ ಜ.31ರೊಳಗಾಗಿ ರಾಜೀನಾಮೆ ನೀಡುವಂತೆ ಸೇನಾಧಿಕಾರಿ ಬೆದರಿಕೆ ಹಾಕಿರುವುದನ್ನು ಉನ್ನತ ಸೇನಾಧಿಕಾರಿ ತಿಳಿಸಿದ್ದಾರೆ.