ನವದೆಹಲಿ, ಡಿ. 27 (DaijiworldNews/HR): ಮೋಟಾರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 2021ರ ಮಾರ್ಚ್ 31ರವರೆಗೆ ವಿಸ್ತರಿಸಿದೆ.
ಸಾಂಧರ್ಭಿಕ ಚಿತ್ರ
ಈ ಮೊದಲು ಡಿಸೆಂಬರ್ 31ರೊಳಗೆ ಎಲ್ಲಾ ದಾಖಲೆಗಳನ್ನು ನೀಡಲು ತಿಳಿಸಲಾಗಿತ್ತು. ಹಾಗೆಯೇ ವಾಹನ ನೋಂದಣಿ ನೀತಿ ಸುಧಾರಣೆಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಇನ್ನು ವಿಶೇಷ ಚೇತನರಿಗೆ ವಾಹನ ಮಾಲಿಕತ್ವ ಸಮಸ್ಯೆಗೆ ಪರಿಹಾರ ನೀಡಲು ಈ ಹಿಂದೆ ಇದ್ದ ಕಾಯ್ದೆಯಲ್ಲಿ ವಾಹನ ಮಾಲಿಕತ್ವ ಕುರಿತಂತೆ ಸ್ಪಷ್ಟವಾಗಿ ನಮೂದಿಸಲು ಅವಕಾಶ ಇರಲಿಲ್ಲ.
ಇದರಿಂದಾಗಿ ವಿಶೇಷ ಹಣಕಾಸು ನೆರವು, ಯೋಜನೆಗಳ ಸೌಲಭ್ಯ ಪಡೆಯುವುದು ಕಷ್ಟವಾಗಿತ್ತು. ಈಗ ಮೋಟಾರು ವಾಹನಗಳ ದಾಖಲಾತಿಗಳಲ್ಲಿ ಮಾಲಿಕತ್ವದ ವಿವರಗಳಿಗೆ ಸಂಬಂಧಿಸಿದಂತೆ ವಾಹನ ನೋಂದಣಿ ನೀತಿ ಸುಧಾರಣೆಗೆ ಸಾರಿಗೆ ಸಚಿವಾಲಯ ಅಧಿಸೂಚನೆಯನ್ನು ಕೂಡ ಈಗಾಗಲೇ ಪ್ರಕಟಿಸಿದೆ.
ಮೋಟಾರು ವಾಹನ ನಿಯಮಾವಳಿಗಳಿಗೆ ತಿದ್ದುಪಡಿ ಹೊರಡಿಸಲಾಗಿದ್ದು, ಇದರಿಂದ ಮುಖ್ಯವಾಗಿ ವಿಶೇಷ ಚೇತನರಿಗೆ ಉಪಯೋಗವಾಗಲಿದೆ ಎನ್ನಲಾಗಿದೆ.