ಮುಂಬೈ,ಡಿ. 27 (DaijiworldNews/HR): "ಶಿವಸೇನಾ ಮತ್ತು ಯುಪಿಎ ಪಕ್ಷಗಳ ನಡುವಿನ ಮೈತ್ರಿ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದೆ" ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಅಶೋಕ್ ಚವಾಣ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಶಿವಸೇನಾವು ಯುಪಿಎ ನಾಯಕತ್ವದ ಕುರಿತು ಮಾತನಾಡುವುದು ಸರಿಯಲ್ಲ, ಮಹಾರಾಷ್ಟ್ರದಲ್ಲಿ ಶಿವಸೇನಾ ಜೊತೆಗಿನ ನಮ್ಮ ಮೈತ್ರಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನುಆಧರಿಸಿದ್ದು, ಇದು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದೆ" ಎಂದರು.
ಇನ್ನು "ಶರದ್ ಪವಾರ್ ಅವರು ಯುಪಿಎಯ ಮುಖ್ಯಸ್ಥರಾಗಲಿದ್ದಾರೆ ಎಂಬ ಊಹಾಪೋಹಗಳನ್ನು ಸ್ವತಃ ಅವರೇ ಅಲ್ಲಗಳೆದಿದ್ದಾರೆ, ಯುಪಿಎಗೆ ಸೋನಿಯಾ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆಯಿದ್ದು, ಈ ವಿಷಯದ ಕುರಿತ ಚರ್ಚೆ ಅನಗತ್ಯವಾಗಿದೆ" ಎಂದು ಹೇಳಿದ್ದಾರೆ.