ಹೊಸದಿಲ್ಲಿ,ಡಿ. 27 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ರೈತರು ಅರ್ಬನ್ ನಕ್ಸಲ್ ಗಳು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚಗ್ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಇದೊಂದು ಮೂರ್ಖತನದ ಹೇಳಿಕೆ ಎಂದು ಹೇಳಿದ್ದಾರೆ.
ಇ ಕುರಿತು ಟ್ವೀಟ್ ಮಾಡಿರುವ ಅವರು, "ಬಿಜೆಪಿಯ ಹಿರಿಯ ನಾಯಕ ತರುಣ್ ಚಗ್ ಅವರು ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಅರ್ಬನ್ ನಕ್ಸಲ್ ಗಳು ಎಂದು ಕರೆದಿರುವುದು ಮೂರ್ಖತನದ್ದಾಗಿದೆ. ಈ ಕೃಷಿ ಮಸೂದೆ ದಿಲ್ಲಿಗೆ ಮಾತ್ರ ಸೀಮಿತವಾಗಿದೆ ಎಂದು ಅವರು ಭಾವಿಸಿದ್ದಾರಾ?" ಎಂದು ಪ್ರಶ್ನಿಸಿದ್ದಾರೆ.
ಇನ್ನು "ನಾವು ಎಂದಿಗೂ ಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದೇವೆ. ಶಾಂತಿಯುತ ಪ್ರತಿಭಟನೆಯ್ನೂ ನಡೆಸಿದ್ದೇವೆ. ನೀವು ರೈತರಿಗೆ ಪ್ರಯೋಜನವಾಗದಂತಹ ಮಸೂದೆಗಳನ್ನು ಜನರ ಮೇಲೆ ಹೇರಿ, ಪಂಜಾಬ್ ಸರಕಾರವನ್ನೋ, ಪೊಲೀಸರನ್ನೋ ತೆಗಳಿ ಪ್ರಯೋಜನವಿಲ್ಲ" ಎಂದು ಹೇಳಿದ್ದಾರೆ.