ಶ್ರೀನಗರ,ಡಿ. 27 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಜೈಷ್ ಎ- ಮೊಹಮ್ಮದ್ ಸಂಘಟನೆಯ ನಾಲ್ವರನ್ನು ಭಾನುವಾರ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಪೊಲೀಸ್ ಇಲಾಖೆ ಬಿಟ್ಟು ಉಗ್ರಗಾಮಿಯಾಗಿರುವ ಅಲ್ತಾಫ್ ಹುಸೇನ್, ಪುಲ್ವಾಮಾ ನಿವಾಸಿಗಳಾದ ಶಬೀರ್ ಅಹ್ಮದ್ ಭಟ್, ಜಮ್ಶೀದ್ ಮ್ಯಾಗ್ರೇ ಮತ್ತು ಜಾಹಿದ್ ದಾರ್ ಎಂದು ಗುರುತಿಸಲಾಗಿದೆ.
ಪೊಲೀಸರು ಖಚಿತ ಮಾಹಿತಿ ಮೇರೆಗೆ ಹಯಾತ್ ಪೋರಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಈ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಪೊಲೀಸ್ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಇನ್ನು ಬಂಧಿತರಿಂದ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.