ಕಲಬುರಗಿ, ಡಿ. 27 (DaijiworldNews/MB) : ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಸಮೀಪದ ಇಂಗಳಗಿ ಗ್ರಾಮದಲ್ಲಿ ಅಭ್ಯರ್ಥಿಯೊಬ್ಬರು ಮತದಾನದ ಮುಂಚಿನ ದಿನ ಶನಿವಾರ ರಾತ್ರಿ 10 ಗಂಟೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಇಂಗಳಗಿಯ ವಾರ್ಡ್ ನಂ.4ರ ಅಭ್ಯರ್ಥಿ ಮಂಜುಳಾ ಗುಡುಬಾ ಮಗುವಿಗೆ ಜನ್ಮ ನೀಡಿದವರು. ಶನಿವಾರ ಸಂಜೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ರಾತ್ರಿ ಮಗುವಿಗೆ ಜನನ ನೀಡಿದ್ದಾರೆ.
ಇನ್ನು ಮಂಜುಳಾ ಅವರು ವಾರ್ಡ್ ನಂ.4ರಲ್ಲಿ ಸ್ಫಂರ್ದಿಸುತ್ತಿದ್ದರೆ, ಅವರ ಅತ್ತೆ ವಾರ್ಡ್ ಸಂಖ್ಯೆ 3ರಲ್ಲಿ ಕಣಕ್ಕಿಳಿದಿದ್ದಾರೆ ಎಂದು ವರದಿಯಾಗಿದೆ.