ಮೈಸೂರು, ಡಿ.27 (DaijiworldNews/PY): "ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಸಿಎಂ ಸ್ಥಾನಕ್ಕೆ ತಿರಸ್ಕರಿಸಿದ್ದು ನಾನಲ್ಲ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ತಿಳಿಸಲಿ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸಿಎಂ ಆಗುವಂತ ಅವಕಾಶ ಖರ್ಗೆ ಅವರಿಗಿತ್ತು ಎಂಬ ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಖರ್ಗೆಯವರ ಹೆಸರನ್ನು ನಾನು ತಿರಸ್ಕರಿಸಿಲ್ಲ. ಯಾರು ಮಾಡಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಈ ವಿಚಾರ ದೇವೇಗೌಡರಿಗೆ ತಿಳಿದಿದ್ದರೆ ಹೇಳಲಿ" ಎಂದರು.
ಸಿದ್ದರಾಮಯ್ಯ ಪಕ್ಷ ಕಟ್ಟಿಲ್ಲ ಎನ್ನುವ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಪಾಪ ದೇವೇಗೌಡರು. ನಾನು ಅವರ ಬಗ್ಗೆ ಪ್ರತಿಕ್ರಿಯೆ ನೀಡಬಾರದೆಂದುಕೊಂಡಿದ್ದೆ. ಆರು ವರ್ಷಗಳ ಕಾಲ ನಾನು ಜೆಡಿಎಸ್ ಅಧ್ಯಕ್ಷನಾಗಿದ್ದೆ. ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ?" ಎಂದು ಕೇಳಿದರು.
"ಕುರುಬರನ್ನು ಮೀಸಲಾತಿ ಪಟ್ಟಿಗೆ ಸೇರಿಸುವ ವಿಚಾರದ ಬಗ್ಗೆ ಹೋರಾಟ ಮಾಡಬೇಕಾಗಿಲ್ಲ. ಇದು ಕುರುಬರನ್ನು ಇಬ್ಭಾಗ ಮಾಡುವಂತ ಹುನ್ನಾರವಾಗಿದೆ" ಎಂದರು.