ನವದೆಹಲಿ, ಡಿ.27 (DaijiworldNews/PY): ಜನವರಿ ತಿಂಗಳನಲ್ಲಿ ಭಾರತಕ್ಕೆ ಫ್ರಾನ್ಸ್ನಿಂದ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಬರಲಿದ್ದು, ವಾಯುಪಡೆಯಲ್ಲಿ ರಫೇಲ್ ಯುದ್ಧ ವಿಮಾನಗಳ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ.
ಇದು ಮೂರನೇ ಹಂತದ ರಫೆಲ್ ಹಸ್ತಾಂತರವಾಗಿದ್ದು, ಈ ಹಂತದ ಯುದ್ಧ ವಿಮಾನಗಳು ಫ್ರಾನ್ಸ್ನಿಂದ ಗುಜರಾತ್ನ ಜಾಮ್ನಗರಕ್ಕೆ ಹಾರಾಟ ನಡೆಸಲಿವೆ. ಈ ಜೆಟ್ಗಳು ಸುಧಾರಿತ ಶಸ್ತ್ರಾಸ್ತ್ರಗಳನ್ನು ಕೂಡಾ ಹೊಂದಿವೆ.
2016ರಲ್ಲಿ ಭಾರತ ಹಾಗೂ ಫ್ರಾನ್ಸ್ ನಡುವೆ ಸುಮಾರು 59,000 ಕೋಟಿ ರೂ.ಗಳ ವೆಚ್ಚದಲ್ಲಿ 36 ಉನ್ನತ ದರ್ಜೆಯ ರಫೆಲ್ ಫೈಟರ್ ಜೆಟ್ಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಜುಲೈ 29ರಂದು ಭಾರತ ಮೊದಲ ಹಂತದಲ್ಲಿ ಮೂರು ರಫೇಲ್ ಜೆಟ್ಗಳನ್ನು ಸ್ವೀಕರಿಸಿದ್ದು, ಈ ಮೂರು ರಫೇಲ್ ಜೆಟ್ಗಳನ್ನು ಸೆ.10ರಂದು ವಾಯುನೆಲೆಗೆ ಸೇರ್ಪಡೆಗೊಳಿಸಲಾಯಿತು. ಇದಾದ ಬಳಿಕ ಭಾರತ ನವೆಂಬರ್ನಲ್ಲಿ ಫೈಟರ್ ಜೆಟ್ಗಳನ್ನು ಪಡೆದುಕೊಂಡಿತ್ತು.
ಪ್ರತಿ ಎರಡು ತಿಂಗಳಿಗೆ ಒಮ್ಮೆ 3-4 ಜೆಟ್ಗಳನ್ನು ಸೇರಲು ಐಎಎಫ್ ಯೋಜಿಸಿದ್ದು, 36 ಜೆಟ್ಗಳನ್ನು ಅಂಬಾಲಾ ಹಾಗೂ ಪಶ್ಚಿಮ ಬಂಗಾಳದ ಹಸಿಮಾರ ಮೂಲದ ಎರಡು ಸ್ಕ್ವಾಡ್ರನ್ಗಳಲ್ಲಿ ನಿಯೋಜನೆ ಮಾಡಲಾಗುತ್ತದೆ.