ಬಾಗಲಕೋಟೆ,ಡಿ.27 (DaijiworldNews/HR): "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ಖಂಡಿಸಿ ಇಂದು ದೇಶದಲ್ಲಿ ನಡೆಯುತ್ತಿರುವುದು ರೈತರ ಚಳವಳಿ ಅಲ್ಲ, ಅದರ ಮುಖವಾಡದಲ್ಲಿ ಇನ್ನೇನೋ ನಡಿಯುತ್ತಿದೆ" ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಈ ಕುರಿತು ರೈತರ ಚಳವಳಿ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಪ್ರಧಾನಿ ಮೋದಿಯವರು ರೈತರ ಸಮಸ್ಯೆ ಪರಿಹಾರಕ್ಕೆ ಮಾತುಕತೆಗೆ ಬರುವಂತೆ ಕರೆಯುತ್ತಿದ್ದಾರೆ, ಇದಕ್ಕೆ ಒಪ್ಪದೆ ಇನ್ನೇನೋ ಮಾಡಬೇಕು ಎಂದು ಅವರು ಹೇಳುತ್ತಿರುವುದರಿಂದ ಚಳವಳಿ ದಿಕ್ಕು ತಪ್ಪಿ ಹೋಗಿದೆ ಹಾಗಾಗಿ ಈ ಪ್ರತಿಭಟನೆಗೆ ನಮ್ಮ ಸಂಪೂರ್ಣ ಸಹಮತಿ ಇಲ್ಲ" ಎಂದರು.
ಇನ್ನು "ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ಧಿ ನೋಡಿದರೆ ರೈತರೇ ಚಳವಳಿ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆಯೇ ನಮಗೆ ಸಂಶಯ ಇದೆ" ಎಂದು ಹೇಳಿದ್ದಾರೆ.