ಚಿಕ್ಕಮಗಳೂರು, ಡಿ.27 (DaijiworldNews/HR): ಬಿಜೆಪಿ ಸರ್ಕಾರ ಅವಧಿಯಲ್ಲೇ ದತ್ತಪೀಠಕ್ಕೆ ಮುಕ್ತಿ ನೀಡಿ, ದತ್ತಾತ್ರೇಯ ಮಂದಿರ ನಿರ್ಮಾಣವಾಗುತ್ತದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ದತ್ತಜಯಂತಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, "ದತ್ತಪೀಠದ ಮುಕ್ತಿಗೆ ಕಾನೂನಿನ ಅಡೆತಡೆಗಳಿದ್ದು, ಆ ಕುರಿತು ನಮ್ಮ ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಾರೆ. ರಾಮ ಮಂದಿರದಂತೆ ದತ್ತಪೀಠದಲ್ಲಿ ದತ್ತಮಂದಿರವನ್ನು ಬಿಜೆಪಿ ಸರ್ಕಾರದ ಅವಧಿಯಲ್ಲೇ ನಿರ್ಮಾಣ ಮಾಡುತ್ತೇವೆ" ಎಂದರು.
ಇನ್ನು "ದತ್ತಪಾದುಕೆ ಇರುವುದು ಚಿಕ್ಕಮಗಳೂರಿನಲ್ಲಿ ಆದರೆ ಜಗತ್ತಿನಾದ್ಯಂತ ದತ್ತ ಭಕ್ತರಿದ್ದಾರೆ, ದತ್ತಪೀಠ ನಮ್ಮದಾಗುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.