ನವದೆಹಲಿ, ಡಿ.27 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಡಿ.28ರ ಸೋಮವಾರದಂದು ದೇಶದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೋದಿ ಅವರು ದೆಹಲಿಯ ಮೆಟ್ರೋದ 37 ಕಿ.ಮೀ ಉದ್ದದ ಮೆಜೆಂಟಾ ಲೈನ್ ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕ ರಹಿತ ರೈಲು ಸೇವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇದರ ಜೊತೆ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಅನ್ನು ಕೂಡಾ ಆರಂಭಿಸಲಿದ್ದಾರೆ ಎಂಬುದಾಗಿ ಮೆಟ್ರೋ ನಿಗಮ ತಿಳಿಸಿದೆ.
ಕೊರೊನಾ ನಿಯಂತ್ರಣ ಹಿನ್ನೆಲೆ ಮೆಟ್ರೋ ನಿಲ್ದಾಣಗಳನ್ನು ಇನ್ನೂ ಕೂಡಾ ಪ್ರಯಾಣಿಕರಿಗೆ ಟೋಕನ್ ಮಾರಾಟಕ್ಕೆ ಅನುಮತಿ ನೀಡಲಾಗಿಲ್ಲ, ಈ ಹಿನ್ನೆಲೆ ಸಾರ್ವಜನಿಕರು ಕ್ಯಾಶ್ಲೆಸ್ ವಿಧಾನವನ್ನು ಬಳಸಲು ತಿಳಿಸಲಾಗಿದೆ.