ನವದೆಹಲಿ, ಡಿ.27 (DaijiworldNews/PY): ಭಾರತೀಯ ಜನತಾ ಪಕ್ಷವು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿ ಮಾಜಿ ಸಂಸದ ಹರಿಂದರ್ ಸಿಂಗ್ ಖಾಲ್ಸಾ ಅವರು ಬಿಜೆಪಿ ಪಕ್ಷ ತೊರೆದಿದ್ದಾರೆ.
"ಬಿಜೆಪಿ ಪಕ್ಷವು ಪ್ರತಿಭಟನಾನರತ ರೈತರಿಗೆ ಸೂಕ್ತವಾದ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ. ರೈತರ ವಿರುದ್ದವಾಗಿ ವಿಭಿನ್ನವಾದಂತಹ ನಿಲು ತಳೆದಿರುವ ಕಾರಣ ನಾನು ಬಿಜೆಪಿಗೆ ರಾಜೀನಾಮೆ ನೀಡಲು ತೀರ್ಮಾನ ಮಾಡಿದ್ದೇನೆ" ಎಂದಿದ್ದಾರೆ.
ಖಾಲ್ಸಾ ಅವರು, 2014ರಲ್ಲಿ ಫತೇರ್ಗಡದಲ್ಲಿ ಆಮ್ ಆದ್ಮ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಚುನಾಯಿತರಾಗಿದ್ದರು. ಆದರೆ, ಪಕ್ಷ ವಿರೊಧಿಗಳ ಚಟುವಟಿಕೆಗಳ ಕಾರಣದಿಂದ ಅವರನ್ನು ಆಮ್ ಆದ್ಮಿ ಪಕ್ಷದಿಂದ ಅಮಾನತು ಮಾಡಲಾಗಿತ್ತು. ನಂತರ ಅವರು 2019ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ನೂತನ ಕೃಷಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಳೆದೊಂದು ತಿಂಗಳಿನಿಂದ ರೈತರು ದೆಹಲಿ ಗಡಿಯ ವಿವಿದ ಪ್ರದೇಶಗಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.