ಬೆಂಗಳೂರು, ಡಿ. 27 (DaijiworldNews/MB) : ಬೆಂಗಳೂರು ಮೆಟ್ರೋ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ) ಬಸ್ಗಳಲ್ಲಿ ಪ್ರಯಾಣಿಸುವ ಕಿಟಕಿ ಬದಿ ಸೀಟಿನ ಪ್ರಯಾಣಿಕರ ಮೊಬೈಲ್ಗಳನ್ನು ಕದಿಯುತ್ತಿದ್ದ ಓರ್ವ ಚಾಲಕಿ ಖದೀಮ ಈವರೆಗೆ ಒಟ್ಟು 101 ಮೊಬೈಲ್ಗಳನ್ನು ಕದ್ದಿದ್ದಾನೆ. ಈತನನ್ನು ಪೊಲೀಸರು ಬಂಧಿಸಿದ್ದು ಕಿಟಕಿ ಬದಿಯಲ್ಲಿ ಕೂರುವ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡೇ ಕಳ್ಳತನ ಮಾಡುತ್ತಿದೆ ಎಂದು ಹೇಳುತ್ತಾನೆ ಈ ಖದೀಮ.
ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭ ಅಶೋಕ್ನಗರ ನಿಲ್ದಾಣದ ಸಹಾಯಕ ಸಬ್ಇನ್ಸ್ಪೆಕ್ಟರ್ ದೇವರಾಜು ಅವರು ಕಳ್ಳ ಮುಬಾರಕ್ನನ್ನು ಬಂಧಿಸಿದ್ದಾರೆ.
ಆ ಸಂದರ್ಭದಲ್ಲಿ ಮುಬಾರಕ್ನೊಂದಿಗೆ ಇದ್ದ ಇತರ ಇಬ್ಬರು ಪರಾರಿಯಾಗಿದ್ದಾರೆ. ಬಂಧಿತನನ್ನು ಠಾಣೆಗೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸಿದಾಗ ಆತ ತನ್ನ ಮಾಸ್ಟರ್ ಪ್ಲ್ಯಾನ್ ಅನ್ನು ಬಿಚ್ಚಿಟ್ಟಿದ್ದಾನೆ.
ಮುಬಾರಕ್ನಿಂದ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ 101 ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಬಾರಕ್ ಮತ್ತು ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪರಾರಿಯಾಗಿದ್ದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.