ಶಿಮ್ಲಾ, ಡಿ.26 (DaijiworldNews/PY): ರೊಹ್ಟಾಂಗ್ನ ಅಟಲ್ ಸುರಂಗ ಮಾರ್ಗದೊಳಗೆ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ ಕಾರಣಕ್ಕಾಗಿ ಹಿಮಾಚಲ ಪ್ರದೇಶ ಪೊಲೀಸರು 10 ಪ್ರವಾಸಿಗರನ್ನು ಬಂಧಿಸಿ, ಮೂರು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುರಂಗದೊಳಗೆ ತಮ್ಮ ವಾಹನಗಳನ್ನು ನಿಲ್ಲಿಸಿ, ಹಾಡು ಹಾಕಿ ನೃತ್ಯ ಮಾಡಿದ್ದರು. ಹಾಗಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು ಎಂದು ಕುಲು ಎಸ್.ಪಿ ಗೌರವ್ ಸಿಂಗ್ ತಿಳಿಸಿದ್ದಾರೆ.
ಈ ಹತ್ತು ಮಂದಿ ಪ್ರವಾಸಿಗರು ಕೂಡಾ ದೆಹಲಿಯವರಾಗಿದ್ದು, ಇವರು 20-30 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಹೇಳಿದ್ದಾರೆ.