ತಿರುವನಂತಪುರ, ಡಿ.26 (DaijiworldNews/HR): ಯುವಕನೊಬ್ಬನ ಹತ್ಯೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದ್ದು, ಇದು ಮರ್ಯಾದೆಗೇಡು ಹತ್ಯೆ ಎನ್ನುವ ಸಂಶಯ ವ್ಯಕ್ತವಾಗಿದೆ.
ಪಾಲಕ್ಕಾಡ್ನ ತೆಂಕುರ್ಶಿ ಬಳಿಯ ಇಳಮಂದಂನ ಆರ್ಮುಗಂ ಅವರ ಮಗ ಅನೀಶ್(27) ಮೃತ ಯುವಕ.
ಯುವಕನ ಪತ್ನಿಯ ಕುಟುಂಬದವರೇ ಈ ಮರ್ಯಾದೆಗೇಡು ಹತ್ಯೆ ನಡೆಸಿದ್ದಾರೆ ಎಂದು ಯುವಕನ ಸಂಬಂಧಿಕರು ಆರೋಪಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿಯ ತಂದೆ ಪ್ರಭುಕುಮಾರ್ ಹಾಗೂ ಮಾವ ಸುರೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಅನೀಶ್ ಕೆಳಜಾತಿಯವನು ಎಂಬ ಕಾರಣಕ್ಕೆ ಇದಕ್ಕೆ ಪಿಳ್ಳೈ ಸಮುದಾಯದ ಹರಿತಾ ಅವರ ಕುಟುಂಬದವರು ವಿರೋಧಿಸುತ್ತಿದ್ದರು. ಮೂರು ತಿಂಗಳ ಹಿಂದೆ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರ ಮದುವೆ ನಡೆದಿತ್ತು. ಯುವಕನ ಕುಟುಂಬವೂ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ಹರಿತಾ ಅವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದರು. 'ಹುಡುಗಿಯ ಕುಟುಂಬದವರು ಅನೀಶ್ನನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದರು ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.