ತಿರುವನಂತಪುರಂ, ಡಿ. 26 (DaijiworldNews/MB) : ಇಲ್ಲಿನ ಕಾರಕೋಣಂನ ತ್ರೇಶ್ಯಪುರಂನಲ್ಲಿರುವ ನಿವಾಸದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
51 ವರ್ಷದ ಶಖಾ ಎಂಬ ಮಹಿಳೆ ತಮ್ಮ ಮನೆಯಲ್ಲಿ ಶನಿವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆಕೆಯ 26 ವರ್ಷದ ಪತಿ ಅರುಣ್ನನ್ನು ವಶಕ್ಕೆ ಪಡೆದಿದ್ದಾರೆ.
ಶಖಾಗೆ ವಿದ್ಯುದಾಘಾತವಾಗಿದ್ದು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಹೇಳಲಾಗಿದೆ.
ಮಹಿಳೆ ಶಖಾ ಹಾಗೂ ಅರುಣ್ ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.
ಅರುಣ್ ಹೇಳಿಕೆ ಪ್ರಕಾರ, ಮನೆಯಲ್ಲಿ ಅಲಂಕರಿಸಲಾಗಿದ್ದ ವಿದ್ಯುತ್ ಅಲಂಕಾರಿಕ ಸಾಮಾಗ್ರಿಗಳಿಂದ ಶಖಾಗೆ ವಿದ್ಯುದಾಘಾತವಾಗಿದೆ.
ಈ ಸಾವು ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಯುತ್ತಿದೆ.