ಭುವನೇಶ್ವರ್, ಡಿ.26 (DaijiworldNews/HR): ಒಡಿಶಾದ ಬರ್ಘರ್ ಜಿಲ್ಲೆಯ ನಿವಾಸಿಯಾಗಿರುವ ನಿವೃತ್ತ ಬ್ಯಾಂಕ್ ಅಧಿಕಾರಿ ಜಯ್ ಕಿಶೋರ್ ಪ್ರಧಾನ್ ತಮ್ಮ 64ನೇ ವಯಸ್ಸಿನಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆಯಲು ನಿರ್ಧರಿಸಿದ್ದು, ವೈದ್ಯಕೀಯ ಕಾಲೇಜಿಗೆ ದಾಖಲಾತಿ ಪಡೆದುಕೊಂಡಿದ್ದಾರೆ.
ಜಯ್ ಕಿಶೋರ್ ಅವರು ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತಿಗೊಂಡ ನಾಲ್ಕು ವರ್ಷಗಳ ಬಳಿಕ ನೀಟ್ ತೇರ್ಗಡೆಗೊಂಡು ಬುರ್ಲಾ ಎಂಬಲ್ಲಿನ ಸವೀರ್ ಸುರೇಂದ್ರ ಸಾಯಿ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಯಂಡ್ ರಿಸರ್ಚ್ ಎಂಬ ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಾತಿ ಪಡೆದಿದ್ದಾರೆ.
ಇನ್ನು ನಾಲ್ಕು ದಶಕಗಳ ಸೇವೆಯ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಇವರು ವೈದ್ಯರಾಗುವುದು ತಮ್ಮ ದೀರ್ಘಕಾಲದ ಈಡೇರದ ಕನಸು, ಈಗ ಅದನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುತ್ತಾರೆ.