ಜಮ್ಮು, ಡಿ.26 (DaijiworldNews/HR): ಟಿಆರ್ಎಫ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಿ, ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಬಂಧಿತ ಉಗ್ರರನ್ನು ಚುರಾತ್ನ ರಯೀಸ್ ಅಹ್ಮದ್ ದಾರ್ ಮತ್ತು ಕುಲ್ಗಾಂನ ಅಶ್ಮುಜಿಯ ಸುಬ್ಜಾರ್ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ.
ಶುಕ್ರವಾರದಂದು ಉಗ್ರರು ಸಂಜೆ ಕಾರಿನಲ್ಲಿ ಶ್ರೀನಗರದತ್ತ ಪ್ರಯಾಣಿಸುತ್ತಿದ್ದಾಗ ಅವರನ್ನು ನಾರ್ವಾಲ್ ಬೈಪಾಸ್ನ ಬಳಿ ವಿಶೇಷ ಕಾರ್ಯಾಚರಣೆ ಪಡೆ (ಎಸ್ಒಜಿ) ಪೊಲೀಸರು ಬಂಧಿಸಿದ್ದಾರೆ.
ಇನ್ನು ಬಂಧಿತರಿಂದ ಎಕೆ ಅಸಾಲ್ಟ್ ರೈಫಲ್, ಎರಡು ಮ್ಯಾಗಜಿನ್, 60 ಸುತ್ತು ಗುಂಡು, ಒಂದು ಪಿಸ್ತೂಲ್ ಮತ್ತು 15 ಸುತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.