ಚೆನ್ನೈ, ಡಿ. 26 (DaijiworldNews/MB) : ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಕಾಣಿಸಿಕೊಂಡಿದ್ದ ಹಿನ್ನೆಲೆ ಶುಕ್ರವಾರ ಹೈದರಾಬಾದ್ನ ಅಪೊಲೋ ಆಸ್ಪತ್ರೆಗೆ ದಾಖಲಾಗಿರುವ ರಜನಿಕಾಂತ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯ ಚೇತರಿಕೆ ಕಾಣುತ್ತಿದೆ. ಆದರೆ ರಕ್ತದೊತ್ತಡ ಇನ್ನೂ ಕಡಿಮೆಯಾಗಿಲ್ಲ ಎಂದು ಈ ಬಗ್ಗೆ ಅಪೊಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದೆ.
ರಜನಿಕಾಂತ್ ಆಸ್ಪತ್ರೆಗೆ ದಾಖಲಾದ ನಂತರ ವೈದ್ಯರ ತಂಡ ಸೂಕ್ಷ್ಮವಾಗಿ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದೆ. ರಕ್ತದೊತ್ತಡ ನಿಯಂತ್ರಿಸುವ ಸಲುವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ರಕ್ತದೊತ್ತಡ ನಿನ್ನೆಗಿಂತ ಕೊಂಚ ಕಡಿಮೆಯಾಗಿದೆ. ಅವರ ರಕ್ತದೊತ್ತಡ ಸ್ಥಿರವಾಗುವವರೆಗೆ ಆಸ್ಪತ್ರೆಯಲ್ಲಿಯೇ ಅವರನ್ನು ಇರಿಸಲಾಗುವುದು. ರಕ್ತದೊತ್ತಡ, ದಣಿವು ಬಿಟ್ಟು ಬೇರೆ ಯಾವ ರೋಗಲಕ್ಷಣಗಳು ಅವರಿಗೆ ಇಲ್ಲ ಎಂದು ತಿಳಿಸಿದೆ.
ಇನ್ನು ಸಂದರ್ಶಕರ ಭೇಟಿಗೆ ಅವಕಾಶವಿಲ್ಲ ಎಂದು ಕೂಡಾ ಆಸ್ಪತ್ರೆ ತಿಳಿಸಿದೆ.