ಚೆನ್ನೈ, ಡಿ.26 (DaijiworldNews/PY): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳಿಕೆ ಟೀಕೆ ಮಾಡುತ್ತಿರುವ ಪ್ರತಿಪಕ್ಷಗಳ ವಿರುದ್ದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ವಾಗ್ದಾಳಿ ನಡೆಸಿದ್ದು, "ಹೊಸ ಕೃಷಿ ಕಾನೂನುಗಳು ರೈತರ ಹಿತದೃಷ್ಟಿ ಹೊಂದಿದ್ದಾವೆಯೋ ಅಥವಾ ಇಲ್ಲವೂ ಎನ್ನುವ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಡಿಎಂಕೆ ಪಕ್ಷವನ್ನು ಮುಕ್ತ ಚರ್ಚೆಗೆ ಆಹ್ವಾನಿಸಿದ್ದೇನೆ" ಎಂದಿದ್ದಾರೆ.
ರೈತರನ್ನುದ್ದೇಶಿಸಿ ಮಾತನಾಡಿದ ಅವರು, "ರಾಹುಲ್ ಗಾಂಧಿ ಅವರು ಹೊಸ ಕೃಷಿ ಕಾನೂನುಗಳನ್ನು ತಕ್ಷಣವೇ ಹಿಂಪಡೆಯಬೇಕು ಎನ್ನುತ್ತಿದ್ದಾರೆ. ಕೃಷಿ ಕಾನೂನುಗಳಿಗೆ ರೈತರ ಹಿತದೃಷ್ಟಿ ಇದೆಯೋ ಅಥವಾ ಇಲ್ಲವೋ ಎನ್ನುವ ವಿಚಾರದ ಬಗ್ಗೆ ಮುಕ್ತ ಚರ್ಚೆಗೆ ರಾಹುಲ್ ಗಾಂಧಿ ಹಾಗೂ ಡಿಎಂಕೆ ಪಕ್ಷವನ್ನು ಆಹ್ವಾನಿಸಿದ್ದೇನೆ" ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಶುಕ್ರವಾರ ರೈತರ ಪ್ರತಿಭಟನೆಯನ್ನು ಸತ್ಯಾಗ್ರಹ ಎಂದಿದ್ದು, ಹೊಸ ಕೃಷಿ ಕಾಯ್ದೆಗಳ ವಿರುದ್ದ ರೈತರು ಬೆಂಬಲ ನೀಡುವಂತೆ ಒತ್ತಾಯ ಮಾಡಿದ್ದರು.