ನವದೆಹಲಿ,ಡಿ.26 (DaijiworldNews/HR): ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪಿನ ತಪ್ಪಾದ ಪ್ರತಿ ಸಲ್ಲಿಸಿ, ತನ್ನ ಪರವಾಗಿ ತೀರ್ಪು ಪಡೆದಿದ್ದು ಎಸ್.ಶಂಕರ್ ಎಂಬ ವ್ಯಕ್ತಿಗೆ ಸುಪ್ರೀಂಕೋರ್ಟ್ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಶಂಕರ್ ಹಾಗೂ ಇತರರ ವಿರುದ್ಧ ಭ್ರಷ್ಟಾಚಾರದ ಆರೋಪವಿದ್ದು, ಪ್ರಕರಣದ ವಿಚಾರಣೆ ನಡೆಸಿದ್ದ ಹೈದರಾಬಾದ್ನಲ್ಲಿರುವ ಸಿಬಿಐನ ವಿಶೇಷ ನ್ಯಾಯಾಲಯ, ಶಂಕರ್ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1,000 ದಂಡ ವಿಧಿಸಿ ತೀರ್ಪು ನೀಡಿತ್ತು. ಆದರೆ ಈ ತೀರ್ಪಿನ ತಪ್ಪಾದ ಪ್ರತಿಯೊಂದಿಗೆ ಶಂಕರ್ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿಲ್ಲ 1,000 ದಂಡವನ್ನು ಮಾತ್ರ ವಿಧಿಸಿದೆ ಎಂದು ಶಂಕರ್ ಪರ ವಕೀಲರು ವಾದಿಸಿದ್ದರು.
ಇನ್ನು ಈ ವಿಚಾರಣೆ ನಡೆಸಿದ್ದ ಸುಪ್ರಿಂಕೋರ್ಟ್, ಶಂಕರ್ಗೆ 1,000 ದಂಡವನ್ನು ಮಾತ್ರ ವಿಧಿಸಿ, ಅವರನ್ನು ಖುಲಾಸೆಗೊಳಿಸಿತ್ತು. ಬಳಿಕ ಈ ವಿಷಯ ಕುರಿತಂತೆ ತನಿಖೆ ನಡೆಸಿದ ಸುಪ್ರೀಂಕೋರ್ಟ್ನ ಪ್ರಧಾನ ಕಾರ್ಯದರ್ಶಿ ಜೈಲು ಶಿಕ್ಷೆಯಿಂದ ಪಾರಾಗಲು ಸುಪ್ರಿಂಕೋರ್ಟ್ಗೆ ಶಂಕರ್ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವರದಿ ಸಲ್ಲಿಸಿದ್ದರು.